alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಚೆಗೆ ಕಾರಣವಾಗಿದೆ ಗೋಮಾಂಸ ಕುರಿತ ಬಿಜೆಪಿ ಶಾಸಕನ ಹೇಳಿಕೆ

ಗೋವಾದಲ್ಲಿ ಗೋ ರಕ್ಷಕ ದಳದಿಂದ ಗೋ ಮಾಂಸ ವಹಿವಾಟಿಗೆ ತೊಡಕಾಗುತ್ತಿದ್ದು, ಇದು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಶಾಸಕ, ಉಪ ಸಭಾಪತಿ ಮೈಕೆಲ್‌ ಲೋಬೋ ಹೇಳಿದ್ದಾರೆ.

ಗೋ ಹತ್ಯೆ ಕುರಿತು ರಾಷ್ಟ್ರಾದ್ಯಂತ ಬಿಜೆಪಿ ಧ್ವನಿ ಎತ್ತಿದ್ದರೆ, ಗೋವಾ ಬಿಜೆಪಿ ಶಾಸಕರೇ, ಇಂತಹ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಗುರುವಾರ ಮಾತನಾಡಿದ ಅವರು, ಗೋವಾದಲ್ಲಿ ವಿವಿಧ ಬಗೆಯ ಮಾಂಸ ತಿನ್ನುವವರನ್ನು ಕಾಣಬಹುದು. ಅದರಲ್ಲೂ ಪ್ರವಾಸಿಗರು ಗೋಮಾಂಸ ತಿನ್ನುತ್ತಾರೆ. ಆದರೆ ಇದೀಗ ಗೋ ಮಾಂಸ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಹೇಳಿದ್ದಾರೆ.

ಇದಕ್ಕೆ ಗೋ ರಕ್ಷಣೆಯ ಹೆಸರಲ್ಲಿ ಕಾರ್ಯನಿರತರಾಗಿರುವ ಕಾರ್ಯಕರ್ತರು ಕಾರಣ. ವ್ಯಾಪಾರಿಗಳಿಗೆ ಗೋ ರಕ್ಷಣಾ ದಳಗಳ ಬಗ್ಗೆ ಹೆಚ್ಚಿನ ಭಯ ಉಂಟಾಗಿದೆ. ಕೆಲ ಕಾರ್ಯಕರ್ತರು ಗಡಿ ಪ್ರದೇಶದಲ್ಲಿ ಕಾವಲು ನಿಂತಿದ್ದು, ಮಾಂಸ ಗೋವಾ ತಲುಪುವುದನ್ನು ತಡೆಯುತ್ತಿದ್ದಾರೆ. ಗೋವಾ ಮಾಂಸದ ಕಾಂಪ್ಲೆಕ್ಸ್‌ ಸದ್ಯ ಬಂದ್‌ ಮಾಡಲಾಗಿದೆ. ಈ ವಿಚಾರದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದಾರೆ, ಗೋವಾದಲ್ಲಿ ಹೆಚ್ಚು ಜನ ಗೋಮಾಂಸ ಭಕ್ಷಣೆ ಮಾಡುತ್ತಾರೆ. ಇವರನ್ನು ತಡೆಯುವುದು ಅಸಾಧ್ಯ ಎಂದೂ ಅವರು ಹೇಳಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...