alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾರರಿಗೆ ವೈಯಕ್ತಿಕ ಪತ್ರ ರವಾನಿಸಿದ ಬಿಜೆಪಿ

bjp-goes-all-out-to-woo-up-voters-sends-personalised-lettersಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲ್ಪಡುತ್ತಿರುವ ಮಿನಿ ಚುನಾವಣೆ ಈಗ ನಡೆಯುತ್ತಿದೆ. ಅದರಲ್ಲೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಬಿಜೆಪಿ, ಸಮಾಜವಾದಿ ಪಾರ್ಟಿ-ಕಾಂಗ್ರೆಸ್ ಹಾಗೂ ಬಹುಜನ ಸಮಾಜ ಪಕ್ಷಗಳ ನಡುವೆ ಭಾರೀ ಪೈಪೋಟಿಯೇ ನಡೆದಿದೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ ಮೂರು ಹಂತದ ಚುನಾವಣೆ ನಡೆದಿದ್ದು, ಇನ್ನುಳಿದ ಕ್ಷೇತ್ರಗಳ ಚುನಾವಣೆ ಮುಂದೆ ನಡೆಯಲಿದೆ. ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಪ್ರಮುಖ ಪಕ್ಷಗಳು ಮತದಾರರ ಮನ ಸೆಳೆಯಲು ಮುಂದಾಗಿರುವ ಮಧ್ಯೆ ಬಿಜೆಪಿ, 3.5 ಕೋಟಿ ಮತದಾರರಿಗೆ ವೈಯಕ್ತಿಕ ಪತ್ರ ರವಾನಿಸಿದೆ.

ಕುಟುಂಬದ ಮುಖ್ಯಸ್ಥನ ಹೆಸರಿನಲ್ಲಿ ರವಾನಿಸಲಾಗಿರುವ ಈ ಪತ್ರದಲ್ಲಿ ಮತದಾರರ ವೋಟರ್ ಐಡಿ ಮಾಹಿತಿಯೂ ಇದ್ದು, ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮಾಹಿತಿಯೂ ಒಳಗೊಂಡಿದೆ. ಇದರಲ್ಲಿ ಆಡಳಿತಾರೂಢ ಪಕ್ಷದ ಭ್ರಷ್ಟಾಚಾರ, ಯೋಜನೆ ಜಾರಿಯಲ್ಲಿನ ವಿಫಲತೆಗಳನ್ನೂ ಪಟ್ಟಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...