alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಶ್ಮೀರವಿಲ್ಲದ ಭಾರತದ ಭೂಪಟ ಶೇರ್ ಮಾಡಿದ ಕಾಂಗ್ರೆಸ್

ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಭಾರತದ ಭೂಪಟದಿಂದ ಕಾಶ್ಮೀರವನ್ನು ಕತ್ತರಿಸುವ ಮೂಲಕ, ಭಾರತದ ಏಕತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಛತೀಸ್ ಘಡ್ ಬಿಜೆಪಿ ಘಟಕ ಭಾನುವಾರ ದೂರು ದಾಖಲಿಸಿದೆ.

ಛತೀಸ್ ಘಡ್ ಕಾಂಗ್ರೆಸ್ ಟ್ವೀಟರ್ ಖಾತೆಯಲ್ಲಿ ಈ ಪ್ರಮಾದವಾಗಿದ್ದು, ಭಾರತದ ಮುಕುಟದಂತಿರುವ ಕಾಶ್ಮೀರವನ್ನೇ ಮರೆಮಾಚಿರುವ ಫೋಟೋ ಹಾಕಿರುವುದು ಖಂಡನೀಯ. ಇದು ಭಾರತದ ಏಕತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ದೂರು ನೀಡಿದ್ದು, ಸೈಬರ್ ಕ್ರೈಂ ವಿಭಾಗದಲ್ಲಿ ದಾಖಲಾಗಿದೆ.

ಆದರೆ ಅಪರಾಧಕ್ಕೆ ಸಂಬಂಧಿಸಿದಂತೆ ಛತೀಸ್ ಘಡ ಕಾಂಗ್ರೆಸ್ ನ ಜನಾರ್ದನ ಬಿರ್ಸಾ, ಆಗಿರುವ ಪ್ರಮಾದದ ಬಗ್ಗೆ ಕ್ಷಮೆ ಕೋರಿದ್ದಾರೆ. ಚಿತ್ರದ ತಪ್ಪು ಮುದ್ರಣದಿಂದ ಈ ರೀತಿಯಾಗಿದೆ. ಕಾಶ್ಮೀರವಿಲ್ಲದಿರುವುದು ಗಮನಕ್ಕೆ ಬರುತ್ತಿದ್ದಂತೆ ಟ್ವೀಟ್ ನ್ನು ಡಿಲಿಟ್ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಎಂದಿಗೂ ಭಾರತದ ಏಕತೆಯನ್ನು ಪ್ರತಿಪಾದಿಸುತ್ತದೆ ಎಂದಿದ್ದಾರೆ.

ಆದರೆ ಕಾಂಗ್ರೆಸ್ ಈ ರೀತಿಯ ಟ್ವೀಟ್ ಮಾಡುತ್ತಿದ್ದಂತೆ ಬಿಜೆಪಿ, ಟ್ವೀಟ್ ಮೂಲಕ‌ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತವನ್ನು ವಿಭಜಿಸಲು ಕಾಂಗ್ರೆಸ್ ಹೊರಟಿದೆ ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...