alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಜುಮಸ್ತಿಯಲ್ಲಿ ತೊಡಗಿದ್ದ ಜನಪ್ರತಿನಿಧಿಗಳ ವಿರುದ್ದ ಸಾರ್ವಜನಿಕರ ಆಕ್ರೋಶ

ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾದ ಮೇಜರ್ ಕೌಸ್ತುಭ್ ರಾಣೆಯವರ, ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ಮುಂಬೈನಲ್ಲಿ ಸಾರ್ವಜನಿಕರು ಕಾದು ಕುಳಿತಿದ್ದರು. ಆದ್ರೆ, ಬಿಜೆಪಿ ಪಾಲಿಕೆಯ ಸದಸ್ಯರೊಬ್ಬರು ಮಾತ್ರ ಬರ್ತಡೆ ಸೆಲೆಬ್ರೇಷನ್ ಮೂಡ್ ನಲ್ಲಿದ್ದರು. ಬಿಜೆಪಿ ಸ್ಥಳೀಯ ನಾಯಕರ ಈ ನಡೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾದಾಟದಲ್ಲಿ ಹೋರಾಡಿ, ಹುತಾತ್ಮರಾಗಿದ್ದ ಮೇಜರ್ ರಾಣೆಯವರಿಗೆ, ಅಂತಿಮ ನಮನ ಸಲ್ಲಿಸಲು ಅವರ ಪಾರ್ಥಿವ ಶರೀರದ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಆದ್ರೆ, ಇದೇ ವೇಳೆ ಬಿಜೆಪಿ ಕಾರ್ಪೊರೇಟರ್ ಹುಟ್ಟು ಹಬ್ಬ ಸಂಭ್ರಮದಲ್ಲಿ ಭಾಗವಹಿಸಿದ್ದ ವಿಡಿಯೋವನ್ನು ಸ್ಥಳೀಯ ಮಾಧ್ಯಮಗಳು ಬಿತ್ತರಿಸಿದ್ದವು.

ಮಂಜ್ರೇಕರ್ ಎಂಬಾತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲಿಕೆ ಸದಸ್ಯರು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ದೃಶ್ಯಗಳು ಟಿವಿ ಪರದೆಯ ಮೇಲೆ ಬಿತ್ತರವಾಗುತ್ತಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪಾರ್ಟಿಯಲ್ಲಿ ಭಾಗವಹಿಸುವ ಮೂಲಕ ತಾನು ಮಾಡಿದ ತಪ್ಪಿನ ಅರಿವಾಗುತ್ತಿದ್ದಂತೆಯೇ ಶಾಸಕ ನರೇಂದ್ರ ಮೆಹ್ತಾ ಕ್ಷಮೆ ಯಾಚಿಸಿದ್ದಾರೆ. ಹುತಾತ್ಮ ಯೋಧನ ಪಾರ್ಥಿವ ಶರೀರ ಬರುವ ವೇಳೆ ಪಾರ್ಟಿ ಮಾಡಿದ್ದು ತಪ್ಪು ಎಂದಿದ್ದಾರೆ. ನಾವು ಸಮಾರಂಭದಲ್ಲಿ ಭಾಗವಹಿಸಿದ್ದರ ಬಗ್ಗೆ ವಿಷಾದವಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...