alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಹಿತಿ ಕಳವು ಸಂಸ್ಥೆಯೊಂದಿಗೆ ನಂಟು: ಕೆಸರೆರಚಾಟದಲ್ಲಿ ಬಿ.ಜೆ.ಪಿ.–ಕಾಂಗ್ರೆಸ್

ಫೇಸ್ ಬುಕ್ ಕುರಿತಾಗಿ ಜುಕರ್ ಬರ್ಗ್ ಹೇಳಿಕೆ ನೀಡಿದ ಬೆನ್ನಲ್ಲೇ ವಿಶ್ವದಾದ್ಯಂತ ತೀವ್ರತರವಾದ ಚರ್ಚೆಗಳು ನಡೆದಿವೆ. ಇದೇ ವೇಳೆ ಸೋಷಿಯಲ್ ಮೀಡಿಯಾ ದುರ್ಬಳಕೆ ಕುರಿತಾಗಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ನಡುವೆ ರಾಜಕೀಯ ಕೆಸರೆರಚಾಟ ಶುರುವಾಗಿದೆ.

ನ್ಯೂಯಾರ್ಕ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆ, ಫೇಸ್ ಬುಕ್ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹಲವು ದೇಶಗಳ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಸಂಸ್ಥೆಯ ಸೇವೆಯನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂಬುದು ಬಿ.ಜೆ.ಪಿ. ಆರೋಪವಾಗಿದೆ.

ಆದರೆ, ಇದನ್ನು ಅಲ್ಲಗಳೆದಿರುವ ಕಾಂಗ್ರೆಸ್, 2010 ರಲ್ಲಿ ನಡೆದ ಬಿಹಾರ ಚುನಾವಣೆಯಲ್ಲಿಯೇ ಬಿ.ಜೆ.ಪಿ. ಅನಾಲಿಟಿಕಾ ಸಂಸ್ಥೆಯ ಸೇವೆಯನ್ನು ಪಡೆದುಕೊಂಡಿದ್ದು, ಅದರ ಗ್ರಾಹಕನಾಗಿದೆ ಎಂದು ಟೀಕಿಸಿದೆ.

ಬಿ.ಜೆ.ಪಿ. ಹಿರಿಯ ನಾಯಕ ರವಿಶಂಕರ್ ಪ್ರಸಾದ್, 2019 ರ ಲೋಕಸಭೆ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಕಾಂಗ್ರೆಸ್ ಕೇಂಬ್ರಿಜ್ ಅನಾಲಿಟಿಕಾ ಸೂತ್ರವನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, 2010 ರಿಂದಲೇ ಅನಾಲಿಟಿಕಾ ಸಂಸ್ಥೆಯ ಗ್ರಾಹಕನಾಗಿರುವ ಬಿ.ಜೆ.ಪಿ.ಯು ಬಿಹಾರ, ಗುಜರಾತ್ ಚುನಾವಣೆಯಲ್ಲಿ ಆ ಸಂಸ್ಥೆಯ ಸೇವೆ ಬಳಸಿಕೊಂಡಿದೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...