alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿನ ಗಿಳಿಗಳಿಗೂ ಶುರುವಾಗಿದೆ ಡ್ರಗ್ಸ್ ಚಟ…!

ಅಫೀಮು ಕೂಡ ಮಾದಕ ದ್ರವ್ಯಗಳಲ್ಲೊಂದು. ಆದ್ರೆ ವಿವಿಧ ತಿನಿಸುಗಳಲ್ಲಿ ಅಫೀಮು ಬೀಜವನ್ನು ಬಳಸಲಾಗುತ್ತದೆ. ರಾಜಸ್ತಾನದ ಪ್ರತಾಪ್ ಗಢದಲ್ಲಿ ಎಷ್ಟೋ ರೈತರು ಪರವಾನಿಗೆ ಪಡೆದು ಅಫೀಮು ಬೆಳೆಯುತ್ತಿದ್ದಾರೆ.

ಆದ್ರೆ ಪಕ್ಷಿಗಳು ಅಫೀಮು ಬೆಳೆಗಾರರ ನೆಮ್ಮದಿಗೇ ಭಂಗ ತಂದಿವೆ. ಅದರಲ್ಲೂ ಗಿಳಿಗಳ ಕಾಟಕ್ಕೆ ಹೈರಾಣಾಗಿದ್ದಾರೆ ರೈತರು. ಬೆಳೆದ ಬೆಳೆಯನ್ನು ಸ್ವಲ್ಪವೂ ಉಳಿಸದೇ ಗಿಳಿಗಳು ತಿಂದು ಹಾಕುತ್ತಿವೆ.

ಗಿಳಿಗಳಿಗೆ ಕೂಡ ಅಫೀಮಿನ ಚಟ ಶುರುವಾಗಿಬಿಟ್ಟಿದೆ. ಹಾಗಾಗಿ ದಿನೇ ದಿನೇ ಹೊಲಕ್ಕೆ ದಾಳಿ ಇಡ್ತಾ ಇರೋ ಬಾನಾಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ಚೆನ್ನಾಗಿ ಅಫೀಮು ತಿಂದ ಗಿಳಿಗಳಿಗೂ ಮತ್ತೇರುತ್ತಿದೆಯಂತೆ.

ಎಷ್ಟೋ ಬಾರಿ ಅವು ನಶೆಯಲ್ಲಿ ಮರದ ಮೇಲಿಂದ ಕೆಳಕ್ಕೆ ಬೀಳುತ್ತವೆ. ನಶೆ ಇಳಿದ ಬಳಿಕ ಎದ್ದು ಹಾರಿ ಹೋಗುತ್ತವೆ. ಕೆಲವು ಗಿಳಿಗಳನ್ನು ರೈತರು ಹಿಡಿದು ಬುದ್ಧಿ ಕಲಿಸಲು ಮುಂದಾಗಿದ್ದಾರೆ ಪ್ರಯೋಜನವಾಗಿಲ್ಲ. ಹೊಲ ಕಾಯಲು ಗಾರ್ಡ್ ನೇಮಕ ಮಾಡಿದ್ರೂ ಅವು ಕ್ಯಾರೇ ಅಂತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...