alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಚಾರ್ಜ್ ಮಾಡಲು ಈತ ಹೋಗಿದ್ದೆಲ್ಲಿಗೆ ಗೊತ್ತಾ…?

ಮೊಬೈಲ್ ಚಾರ್ಜಿಂಗ್ ಕಡಿಮೆಯಾಯಿತೆಂದ ಕೂಡಲೇ ಅನೇಕರು ಕಂಗಾಲಾಗುವುದು ಸಹಜ. ಇಲ್ಲೊಬ್ಬ ಮಹಾಶಯ ವಿಮಾನ ಪ್ರಯಾಣದ ವೇಳೆ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳುವ ಧಾವಂತದಲ್ಲಿ ವಿಮಾನದ ನಿಷೇಧಿತ ವಲಯ ಕಾಕ್ಪಿಟ್ ಪ್ರವೇಶಿಸಿದ್ದಾನೆ. ಈ ಅಪರಾಧಕ್ಕೆ ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈ-ಕೋಲ್ಕೊತ್ತಾ ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ಮುಂಬೈ ಪೊಲೀಸರಿಗೊಪ್ಪಿಸಿದ್ದಾರೆ. ಇದಿಷ್ಟೇ ಅಲ್ಲ ವಿಮಾನ ಪ್ರಯಾಣದಿಂದಲೂ ಹೊರಹಾಕಲ್ಪಟ್ಟಿದ್ದಾನೆ.

ಮಂಗಳವಾರ ಸಂಜೆ ವಿಮಾನ 5.55 ಕ್ಕೆ ಹೊರಡಬೇಕಾಗಿತ್ತು, ಆದರೆ ಈ ಘಟನೆಯಿಂದ 15 ನಿಮಿಷ ತಡವಾಗಿ ಹೊರಟಿದೆ. ನಿಷೇಧಿತ ಪ್ರದೇಶಕ್ಕೆ ಪ್ರವೇಶಿಸಿದ ಕಾರಣ ಆ ಪ್ರಯಾಣಿಕನ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...