alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಗೆ ಹಾವು ಕಚ್ಚಿತ್ತು, ಆತ ಪತ್ನಿಗೆ ಕಡಿದ…ಯಾಕೆ ಗೊತ್ತಾ?

cobra_650_091414054315

ಪ್ರೀತಿ ಅಮರ ಅನ್ನೋ ಮಾತಿದೆ. ಕೆಲವೊಂದು ಜೋಡಿಯ ಮಧ್ಯೆ ಅದೆಷ್ಟು ಪ್ರೀತಿ ಇರುತ್ತೆ ಅಂದ್ರೆ ಸಾವಿನಲ್ಲೂ ಅವರು ಒಂದಾಗ್ತಾರೆ. ಇನ್ನು ಕೆಲವರು ಸತ್ತ ಮೇಲೂ ಜೊತೆಯಾಗಬೇಕು ಅನ್ನೋ ಕಾರಣಕ್ಕೆ ದುಡುಕಿ ಬಿಡ್ತಾರೆ. ಬಿಹಾರದಲ್ಲೂ ವ್ಯಕ್ತಿಯೊಬ್ಬ ಇಂಥದ್ದೇ ದುಡುಕಿನ ನಿರ್ಧಾರ ಮಾಡಿದ್ದ.

ಬಿರ್ಸಿಂಗ್ಪುರ ಗ್ರಾಮದ ಶಂಕರ್ ರೈ ಎಂಬಾತನಿಗೆ ಮಲಗಿದ್ದಾಗ ವಿಷಕಾರಿ ಹಾವು ಕಡಿದಿತ್ತು. ತಾನು ಬದುಕಲು ಸಾಧ್ಯವೇ ಇಲ್ಲ ಅನ್ನೋದು ಶಂಕರ್ ಗೆ ಖಚಿತವಾಗಿತ್ತು. ಪತ್ನಿ ಅಮಿರಿಯನ್ನು ಶಂಕರ್ ತುಂಬಾನೇ ಪ್ರೀತಿಸ್ತಾ ಇದ್ದ. ತಾನು ಸತ್ತು ಹೋದ್ರೆ ಆಕೆ ಒಂಟಿಯಾಗಿಬಿಡ್ತಾಳೆ ಅನ್ನೋದು ಅವನ ಆತಂಕ.

ಇಬ್ಬರೂ ಜೊತೆಯಾಗಿ ಸಾಯೋಣ ಎಂದುಕೊಂಡು ತಾನೇ ಪತ್ನಿ ಅಮಿರಿಗೆ ಕಚ್ಚಿದ್ದಾನೆ. ತನ್ನ ದೇಹದಲ್ಲಿರೋ ವಿಷ ಸೇರಿ ಅವಳು ಸಾಯುತ್ತಾಳೆ ಎಂದುಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ಇಬ್ಬರೂ ಪ್ರಜ್ಞೆತಪ್ಪಿ ಬಿದ್ದಿದ್ರು. ಅಕ್ಕಪಕ್ಕದ ಮನೆಯವರು ಶಂಕರ್ ಮತ್ತು ಅಮಿರಿಯನ್ನು ಆಸ್ಪತ್ರೆಗೆ ಸೇರಿಸಿದ್ರು.

ಹಾವಿನ ವಿಷವೇರಿ ಶಂಕರ್ ಮೃತಪಟ್ಟಿದ್ದಾನೆ. ಸಕಾಲಕ್ಕೆ ಚಿಕಿತ್ಸೆ ದೊರೆತಿದ್ರಿಂದ ಅಮಿರಿ ಬದುಕುಳಿದಿದ್ದಾಳೆ. ಒಟ್ಟಿಗೆ ಸಾಯಬೇಕು ಅನ್ನೋದು ಪತಿಯ ಕೊನೆಯ ಆಸೆಯಾಗಿತ್ತು. ಹಾಗಾಗಿ ತನ್ನ ಕೈಗೆ ಕಚ್ಚಲು ಒಪ್ಪಿಕೊಂಡೆ ಅಂತಾ ಅಮಿರಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...