alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತಿನಲ್ಲಿ 22 ಸಾವಿರ ಕೋಟಿ ಬಿಟ್ಕಾಯಿನ್ ಹಣ ಲೂಟಿ

ಬಿಟ್ಕಾಯಿನ್ ದೊಡ್ಡ ಹಗರಣವೊಂದು ಗುಜರಾತಿನಲ್ಲಿ ಬಹಿರಂಗವಾಗಿದೆ. ದಿನಕ್ಕೆ ಶೇಕಡಾ 1ರಷ್ಟು ಬಡ್ಡಿ ಹಾಗೂ 100 ದಿನಕ್ಕೆ ಹಣ ಡಬಲ್ ಮಾಡುವ ಆಸೆಗೆ ಬಿದ್ದು ಹಣ ಹೂಡಿದ ಅನೇಕರು ಕೈ ಸುಟ್ಟುಕೊಂಡಿದ್ದಾರೆ. ಮಾಹಿತಿ ಪ್ರಕಾರ ಗುಜರಾತಿನ ಬಿಟ್ಕೆನೆಕ್ಟ್ ಹೆಸರಿನ ಕಂಪನಿಯೊಂದು ಜನರಿಂದ 22 ಸಾವಿರ ಕೋಟಿ ಹಣ ಸಂಗ್ರಹಿಸಿ ಬಾಗಿಲು ಮುಚ್ಚಿದೆ.

ಸೂರತ್ ನಲ್ಲಿ ಮುಖ್ಯ ಕಾರ್ಯಾಲಯ ಹೊಂದಿದ್ದ ಕಂಪನಿ ಯುಕೆಯಲ್ಲಿ ನೋಂದಣಿ ಕಾರ್ಯ ನಡೆಸುತ್ತಿತ್ತು. ದೆಹಲಿ ವಿಮಾನ ನಿಲ್ದಾಣದಲ್ಲಿ ಕಂಪನಿ ಪ್ರಚಾರಕ ದಿವ್ಯೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. 2016 ರ ನೋಟು ನಿಷೇಧದ ಲಾಭವನ್ನು ಈ ಕಂಪನಿ ಮಾಡಿಕೊಂಡಿದೆ. ಈ ಕಂಪನಿಗೆ ಹಣ ಹೂಡಲು ಯಾವುದೇ ದಾಖಲೆಯ ಅಗತ್ಯವಿರಲಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಬೇಕಾದ್ರೂ ವ್ಯವಹಾರ ನಡೆಸಬಹುದಿತ್ತು.

ಹಣ ಲಾಂಡರಿಂಗ್ ಹೇಗೆ ಮಾಡುವುದು ಎಂದು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ್ದು ಗುಜರಾತಿಗರು. 2017 ರಲ್ಲಿ ಬಿಟ್ಕಾಯಿನ್ ಮೌಲ್ಯ ಶೇಕಡಾ 20 ರಷ್ಟು ಹೆಚ್ಚಾಗಿತ್ತು. 900 ಡಾಲರ್ ಬದಲು 20 ಸಾವಿರ ಡಾಲರ್ ಆಗಿತ್ತು. 2018 ರಲ್ಲಿ, ಟೆಕ್ಸಾಸ್ ಮತ್ತು ನಾರ್ತ್ ಕೆರೋಲಿನಾ ಸೆಕ್ಯುರಿಟಿ ಬೋರ್ಡ್ ಬಿಟ್ಕಾಯಿನ್ ಒಪ್ಪಂದವನ್ನು ನಿಷೇಧಿಸಿತು. ಇದ್ರಿಂದಾಗಿ ಬಿಸಿಸಿ ಬೆಲೆ 362 ಡಾಲರ್ ಬದಲು ರಾತ್ರೋರಾತ್ರಿ 2 ಡಾಲರ್ ಗೆ ಇಳಿದಿತ್ತು. ಈಗ ಅದ್ರ ಮೊತ್ತ ಮತ್ತಷ್ಟು ಇಳಿದಿದೆ.

ಬಿಟ್ಕಾಯಿನ್ ನಲ್ಲಿ ಹಣ ತೊಡಗಿಸಿದವರಲ್ಲಿ ಬಹುತೇಕರು ಕಪ್ಪು ಹಣ ಹೂಡಿಕೆ ಮಾಡಿದ್ದರು. ಹಾಗಾಗಿ ಈ ಬಗ್ಗೆ ದೂರು ನೀಡಿಲ್ಲ. ಪೊಲೀಸರಿಗೆ ಈವರೆಗೆ ಕೇವಲ 1.14 ಕೋಟಿ ವಂಚನೆಯಾಗಿರುವ ಬಗ್ಗೆ ಮಾತ್ರ ದೂರು ದಾಖಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...