alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಾರಣೆಗೆ ಹಾಜರಾಗುವಾಗ ನಗುತ್ತಿದ್ದ ಅತ್ಯಾಚಾರ ಆರೋಪಿ

ನನ್‌ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತು ಬಂಧನಕ್ಕೊಳಗಾಗಿರುವ ಬಿಷಪ್ ಫ್ರಾನ್ಕೋ ಮುಲಕ್ಕಲ್ ರನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

ನನ್ ಮೇಲೆ ಅತ್ಯಾಚಾರವೆಸಗುವ ಉದ್ದೇಶದಿಂದಲೇ ಬಿಷಪ್ ಕಾನ್ವೆಂಟ್‌ಗೆ ಬಂದಿದ್ದರು. 2014 ರ ಮೇ 5 ರಂದು ರಾತ್ರಿ ಕಾನ್ವೆಂಟ್‌ನ ಅತಿಥಿ ಗೃಹದಲ್ಲಿ ನನ್ ಅವರನ್ನು ಫ್ರಾನ್ಕೋ ಕೂಡಿ ಹಾಕಿದರು. ಮಾರನೇ ದಿನ ಅತ್ಯಾಚಾರವೆಸಗಿದರು. 2014 ರಿಂದ 2016 ರ ನಡುವೆ ಅದೇ ಕೊಠಡಿಯಲ್ಲಿ ಅದೇ ನನ್ ವಿರುದ್ಧ ಅನೈಸರ್ಗಿಕ ಲೈಂಗಿಕ ಕೃತ್ಯವೆಸಗಿದ್ದಾರೆ ಫ್ರಾನ್ಕೋ ಎಂದು ಪೊಲೀಸರು ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದರು.

ಮೂರು ದಿನಗಳ ಕಾಲ ವಿಚಾರಣೆಗೊಳಪಡಿಸಿದ ಬಳಿಕ ಪೊಲೀಸರು ಶುಕ್ರವಾರ ರಾತ್ರಿ ಫ್ರಾನ್ಕೋರನ್ನು ಬಂಧಿಸಿದ್ದರು. ಶನಿವಾರ ಕೊಟ್ಟಾಯಂನ ಪಾಲಾದ ಸ್ಥಳೀಯ ಕೋರ್ಟ್‌ಗೆ ಬಿಷಪ್‌ರನ್ನು ಹಾಜರುಪಡಿಸಿದಾಗ ಅವರು ಬೋಲ್ಡ್ ಆಗಿರಲು ಪ್ರಯತ್ನಿಸಿದರು. ಪ್ರಕರಣದ ವಿಚಾರಣೆಯುದ್ದಕ್ಕೂ ಅವರು ನಗುತ್ತಾ ನಿಂತಿದ್ದರು.

ಪೊಲೀಸರು ಅವರನ್ನು ಕೋರ್ಟ್‌ನಿಂದ ಹೊರಕ್ಕೆ ಕರೆದೊಯ್ಯುತ್ತಿದ್ದಂತೆ ಸ್ಥಳೀಯರು ಅವರತ್ತ ಅಪಹಾಸ್ಯಗೈದರು. ಆಗಲೂ ವಿಚಲಿತರಾಗದ ಬಿಷಪ್ ಪೊಲೀಸ್ ವ್ಯಾನ್‌ನಲ್ಲಿ ಕುಳಿತಾಗಲೂ ನಗುತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...