alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಾವಕಾಶಕ್ಕಾಗಿ ಹಸು ವಿತರಣೆ-ಮುಖ್ಯಮಂತ್ರಿ ನಿವಾಸದಲ್ಲೂ ಸಾಕಣೆ

ಉದ್ಯೋಗಾವಕಾಶ ಹೆಚ್ಚಿಸಲು ಕೈಗಾರಿಕೆ, ಕಂಪನಿಗಳನ್ನು ಸ್ಥಾಪಿಸುವುದು ಸರ್ವೇಸಾಮಾನ್ಯ. ಆದರೆ ತ್ರಿಪುರ ಸರ್ಕಾರ ಉದ್ಯೋಗಾವಕಾಶ ಕಲ್ಪಿಸಲು ಹಸುಗಳನ್ನು ವಿತರಿಸಲು ಮುಂದಾಗಿದೆ.

5000 ಕುಟುಂಬಕ್ಕೆ ಸದ್ಯದಲ್ಲೇ ಹಸುಗಳನ್ನು ವಿತರಿಸುವ ಯೋಜನೆ ಆರಂಭಿಸಲಾಗುವುದು ಎಂದು ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಘೋಷಿಸಿದ್ದಾರೆ. 2000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು 10 ಸಾವಿರ ಕೋಟಿ ರೂ. ಬಂಡವಾಳ ಹೂಡಬೇಕು. ಅದರ ಬದಲು 10 ಸಾವಿರ ಹಸುಗಳನ್ನು 5 ಸಾವಿರ ಕುಟುಂಬಗಳಿಗೆ ನೀಡಿದರೆ ಆರು ತಿಂಗಳಲ್ಲೇ ಆ ಕುಟುಂಬದವರು ಸಂಪಾದನೆ ಕಾಣಲಿದ್ದಾರೆ ಎಂದು ಬಿಪ್ಲಬ್ ತಮ್ಮ ಯೋಜನೆಯ ಪ್ರಯೋಜನವನ್ನು ವಿವರಿಸಿದ್ದಾರೆ.

ಅಲ್ಲದೆ ಮುಖ್ಯಮಂತ್ರಿ ನಿವಾಸದಲ್ಲೂ ದನ ಸಾಕುವ ಮೂಲಕ ನಾನು ಹಾಗೂ ಕುಟುಂಬದವರು ಹಸುವಿನ ಹಾಲು ಸೇವಿಸುತ್ತೇವೆ. ಇದರಿಂದ ಜನತೆ ಕೂಡ ಹಸು ಸಾಕಣೆ ಹಾಗೂ ಹಾಲಿನ ಸೇವನೆಗೆ ಮನಸ್ಸು ಮಾಡುವುದರಿಂದ ಅಪೌಷ್ಟಿಕತೆಯೂ ನಿವಾರಣೆ ಅಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...