alex Certify
ಕನ್ನಡ ದುನಿಯಾ       Mobile App
       

Kannada Duniya

ಸಮ್ಮತಿಯ ಸಂಬಂಧಕ್ಕೆ ಫ್ಲಿಪ್ ಕಾರ್ಟ್ ನಿಂದ ಹೊರಬಿದ್ದರಾ ಬಿನ್ನಿ ಬನ್ಸಾಲ್…?

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಗೂ ದೂರು ನೀಡಿದ ಮಹಿಳೆಗೂ ಸಮ್ಮತಿಯ ಸಂಬಂಧ ಇತ್ತು ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.

ಗಂಭೀರ ವೈಯಕ್ತಿಕ ದುರ್ನಡತೆಯ ಆರೋಪ ಎದುರಿಸುತ್ತಿದ್ದ ಬಿನ್ನಿ ಬನ್ಸಾಲ್ ಇತ್ತೀಚೆಗಷ್ಟೇ ಸಂಸ್ಥೆಯಿಂದ ಹೊರನಡೆದಿದ್ದರು. ಇದು ದೇಶಾದ್ಯಂತ ಭಾರಿ ಕುತೂಹಲ, ಚರ್ಚೆಗೆ ಕಾರಣವಾಗಿತ್ತು.

ಬಿನ್ನಿ ವಿರುದ್ಧ ಜುಲೈ ತಿಂಗಳಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಆ ಬಳಿಕ ಬಿನ್ನಿ ವಿರುದ್ಧ ಸಂಸ್ಥೆ ಸ್ವತಂತ್ರ ತನಿಖೆ ಆರಂಭಿಸಿತ್ತು. ಈ ಬೆಳವಣಿಗೆಗಳ ಕುರಿತು ಮಾಹಿತಿ ಇರುವ ಹೆಸರು ಹೇಳಲಿಚ್ಚಿಸದ ವ್ಯಕ್ಯಿಯೊಬ್ಬರ ಪ್ರಕಾರ, ಬಿನ್ನಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದಾಕೆ ಫ್ಲಿಪ್ ಕಾರ್ಟ್ ನ ಮಾಜಿ ಉದ್ಯೋಗಿ. ಆದರೆ ಈ ತನಿಖಾ ಪ್ರಕ್ರಿಯೆಗಳ ಮಾಹಿತಿ ಇರುವ ಮತ್ತೊಬ್ಬ ವ್ಯಕ್ತಿ, ಇದನ್ನು ಅಲ್ಲಗಳೆದಿದ್ದಾರೆ.

ಆ ಮಹಿಳೆ ಯಾವತ್ತೂ ಫ್ಲಿಪ್ ಕಾರ್ಟ್ ನ ಉದ್ಯೋಗಿ ಆಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಇ-ಕಾಮರ್ಸ್ ದಿಗ್ಗಜ ವಾಲ್ ಮಾರ್ಟ್ಇ ತ್ತೀಚೆಗಷ್ಟೇ ಫ್ಲಿಪ್ ಕಾರ್ಟ್ ಅನ್ನು ಖರೀದಿ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...