alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದ ಆವರಣದಲ್ಲಿ ಬಿಕಿನಿ ಶೂಟ್

kabul-21

ಉದಯ್ಪುರದ ದೇವಸ್ಥಾನವೊಂದರ ಆವರಣದಲ್ಲಿ ವಿದೇಶಿ ಮಾಡೆಲ್ಲೊಬ್ಬಳು ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ದೇವಸ್ಥಾನದ ಆವರಣದಲ್ಲಿ ಬಿಕಿನಿ ಫೋಟೋಶೂಟ್ ನಡೆದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ವರ್ಣಬೇಧ ಆರೋಪದಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ಉದಯ್ಪುರದ ನರ್ಮದೇಶ್ವರ ದೇವಸ್ಥಾನದಲ್ಲಿ ಈ ಫೋಟೋ ಶೂಟ್ ನಡೆದಿದೆ ಎನ್ನಲಾಗ್ತಾ ಇದೆ.ನಿಯತಕಾಲಿಕೆಯ ಛಾಯಾಗ್ರಾಹಕರು ವಿದೇಶಿ ಮಹಿಳೆಯ ಬಿಕಿನಿ ಫೋಟೋ ಕ್ಲಿಕ್ ಮಾಡಿದ್ದಾರೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಧಾರ್ಮಿಕ ಮುಖಂಡರು ಅಪಸ್ವರ ಎತ್ತಿದ್ದಾರೆ.

ಬಿಕಿನಿ ಜೊತೆಗೆ ಭಾರತೀಯ ಮಹಿಳೆಯರನ್ನು ಕೊಳಕು ಹಾಗೂ ಕಪ್ಪು ಎಂದು ತೋರಿಸಲಾಗಿದೆ. ಫೋಟೋ ತೆಗೆದ ನಿಯತಕಾಲಿಕೆ, ಮಾಡೆಲ್ ಹಾಗೂ ಇದಕ್ಕೆ ಒಪ್ಪಿಗೆ ನೀಡಿದ ಸರ್ಕಾರಿ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...