alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸಿಂಹಗಳನ್ನೇ ಚೇಸಿಂಗ್ ಮಾಡಿದ ವಿಡಿಯೊ

ಅಹಮದಾಬಾದ್: ಗುಜರಾತ್ ನ ಗಿರ್ ಅಭಯಾರಣ್ಯದಲ್ಲಿ ಬೈಕ್ ಸವಾರರು ಸಿಂಹಗಳನ್ನು ಚೇಸಿಂಗ್ ಮಾಡಿದ್ದು, ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

2 ಬೈಕ್ ಗಳಲ್ಲಿ ನಾಲ್ವರು ಅಭಯಾರಣ್ಯದೊಳಗೆ ಪ್ರವೇಶಿಸಿದ್ದು, ಸಿಂಹ ಮತ್ತು ಸಿಂಹಿಣಿಯ ಬಳಿ ತೆರಳಿದ್ದಾರೆ. ಬೈಕ್ ಹತ್ತಿರಕ್ಕೆ ಬರುತ್ತಿದ್ದಂತೆ ಬೆದರಿದ ಸಿಂಹಗಳು ಅಲ್ಲಿಂದ ಓಡಿವೆ. ಆದರೂ, ಬಿಡದ ಸವಾರರು ಬೈಕ್ ನಲ್ಲಿ ಸಿಂಹಗಳನ್ನು ಹಿಂಬಾಲಿಸಿದ್ದಾರೆ. ಅವುಗಳ ಸುತ್ತ ಬೈಕ್ ಓಡಿಸಿದ್ದಾರೆ.

ಮಾತ್ರವಲ್ಲ, ತಮ್ಮ ಕಿತಾಪತಿಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬೈಕ್ ಸವಾರರಿಂದ ಪಾರಾಗಲು ಸಿಂಹಗಳು ಪ್ರಯತ್ನಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ವೈರಲ್ ಆಗಿದೆ.

ವನ್ಯಜೀವಿ ಇಲಾಖೆ ಅಧಿಕಾರಿಗಳು ಓರ್ವ ಯುವಕನನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಗಿರ್ ಅಭಯಾರಣ್ಯ ಪ್ರದೇಶ ಸುಮಾರು 1400 ಚ.ಕಿ.ಮೀ ವಿಸ್ತಾರವಾಗಿದ್ದು, ಸುಮಾರು 400 ಏಷ್ಯಾಟಿಕ್ ಸಿಂಹಗಳ ವಾಸಸ್ಥಾನವಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...