alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಪಾರಿ ಬ್ಯಾಗ್ ಕದ್ದ ಕಳ್ಳರಿಗೆ ಸಿಕ್ಕಿದ್ದು ಬರೀ 5 ರೂ…!

ಬೈಕ್ ನಲ್ಲಿ ಬಂದ ಮೂವರು ಖರೀಮರು ವ್ಯಾಪಾರಿ ಬಳಿಯಿದ್ದ ಬ್ಯಾಗ್ ಒಂದನ್ನು ಕಿತ್ತುಕೊಂಡಿದ್ದಾರೆ. ಕಳ್ಳರು ಬ್ಯಾಗ್ ನಲ್ಲಿ 20 ಲಕ್ಷ ರೂಪಾಯಿಯಿದೆ ಎಂದುಕೊಂಡಿದ್ದರು. ಆದ್ರೆ ಅವ್ರ ಲೆಕ್ಕಾಚಾರ ತಪ್ಪಾಗಿದೆ. ಬ್ಯಾಗ್ ನಲ್ಲಿ ಸಿಕ್ಕಿದ್ದು ಬರೀ 5 ರೂಪಾಯಿ. ಅಷ್ಟೇ ಅಲ್ಲ ವ್ಯಾಪಾರಿ ಸ್ಕೂಟಿಯನ್ನೂ ಕದ್ದೊಯ್ದಿದ್ದ ಖರೀಮರು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

ಘಟನೆ ಮೇ 26 ರಂದು ನಡೆದಿತ್ತು. ದೆಹಲಿ ಗಾಂಧಿನಗರದ ಬಳಿ ಸ್ಕೂಟಿಯಲ್ಲಿ ಹೋಗ್ತಿದ್ದ ವ್ಯಾಪಾರಿಯನ್ನು ಅಡ್ಡಗಟ್ಟಿದ್ದ ಮೂವರು, ವಾಹನ ತೆಗೆದುಕೊಂಡು ಪರಾರಿಯಾಗಿದ್ದರು. ಸ್ಕೂಟಿಯಲ್ಲಿದ್ದ ಬ್ಯಾಗ್ ನಲ್ಲಿ ಸುಮಾರು 20 ಲಕ್ಷ ರೂಪಾಯಿಯಿದೆ ಎಂದು ಅವರು ಅಂದಾಜಿಸಿದ್ದರು.

ಆರೋಪಿ ಇಫ್ತಿಖಾರ್ ಇದ್ರ ಮಾಸ್ಟರ್ ಮೈಂಡ್. ಈತನ ಸಹಾಯಕ್ಕೆ ಬಂದಿದ್ದ ಸುಹಾಬ್ ವಿರುದ್ಧ ಐದಾರು ಪ್ರಕರಣಗಳು ದಾಖಲಾಗಿವೆ. ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಶುರು ಮಾಡಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಸ್ಕೂಟಿಯನ್ನೂ ವಶಕ್ಕೆ ಪಡೆದಿದ್ದಾರೆ. ಬ್ಯಾಗಿನಲ್ಲಿ 20 ಲಕ್ಷ ರೂಪಾಯಿ ನಗದಿದೆ ಎಂದುಕೊಂಡಿದ್ದೆವು. ಆದ್ರೆ ಸಿಕ್ಕಿದ್ದು 5 ರೂಪಾಯಿ ಎಂದು ಕಳ್ಳರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...