alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಪಂಚ್ ಮನೆ ಮುಂದೆ ಬೈಕ್ ನಲ್ಲಿ ಹೋಗಿದ್ದೇ ತಪ್ಪಾಯ್ತು

ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದಲ್ಲಿ ಈಗ್ಲೂ ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ದಲಿತರು ಮೇಲ್ವರ್ಗದವರ ಮನೆ ಮುಂದೆ ಬೈಕ್ ಸೇರಿದಂತೆ ಯಾವುದೇ ವಾಹನದಲ್ಲಿ ಹೋಗುವಂತಿಲ್ಲ. ಚಪ್ಪಲಿ ಧರಿಸಿ ಮೇಲ್ವರ್ಗದವರ ಓಣಿಯಲ್ಲಿ ಓಡಾಡುವಂತಿಲ್ಲ. ಇದಕ್ಕೆ ಧರ್ಮಪುರದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ.

ಧರ್ಮಪುರದ ಸರ್ಪಂಚ್ ಮನೆ ಮುಂದೆ ದಲಿತ ಯುವಕನೊಬ್ಬ ಬೈಕ್ ಮೇಲೆ ಹೋಗಿದ್ದಾನೆ. ಇದ್ರಿಂದ ಕೋಪಗೊಂಡ ಸರ್ಪಂಚ್ ಕೆಲ ಸ್ಥಳೀಯರ ಜೊತೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ.ಮಗಳ ಮದುವೆ ಶಾಪಿಂಗ್ ಗಾಗಿ ಬೇರೆ ಊರಿನಿಂದ ವ್ಯಕ್ತಿ ಬಂದಿದ್ದ ಎನ್ನಲಾಗಿದೆ. ಆತ ಧರ್ಮಪುರಿಯ ಸರ್ಪಂಚ್ ಮನೆ ಮುಂದೆ ಬೈಕ್ ನಲ್ಲಿ ಹೋಗಿದ್ದಾನೆ. ಕೋಪಗೊಂಡ ಸರ್ಪಂಚ್ ಹಲ್ಲೆ ನಡೆಸಿದ್ದಲ್ಲದೆ ಮುಂದೆ ಇಂಥ ಘಟನೆ ನಡೆದ್ರೆ ಓಣಿಗೆ ಬಾಂಬ್ ಇಡುವುದಾಗಿ ಬೆದರಿಸಿದ್ದಾನೆ.

ಘಟನೆ ನಂತ್ರ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮಾಡುವ ಬದಲು ದಲಿತನನ್ನು ಅಲ್ಲಿಂದ ಓಡಿಸಿದ್ದಾರೆ. ಮಾಧ್ಯಮದಲ್ಲಿ ವರದಿ ಪ್ರಸಾರವಾದ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...