alex Certify
ಕನ್ನಡ ದುನಿಯಾ       Mobile App
       

Kannada Duniya

ಎಂ ಸೀಲ್ ನಲ್ಲಿ ತಯಾರಾಯ್ತು ಡ್ರೆಸ್, ಆಭರಣ

ನೀರಿನ ಕೊಳವೆ ಸೋರುತ್ತಿದ್ದರೆ ಅದನ್ನು ತಡೆ ಹಿಡಿಯಲು ಎಂ ಸೀಲ್ ಪ್ರಯೋಗ ಮಾಡ್ತಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಬಿಕಾನೇರ್ ನ ಯುವತಿಯೊಬ್ಬಳು ಎಂ ಸೀಲ್ ನಲ್ಲಿ ಆಭರಣ ಹಾಗೂ ಬಟ್ಟೆ ತಯಾರಿಸಿದ್ದಾಳೆ. ಹೊಸದೇನಾದ್ರೂ ಮಾಡಿ ತೋರಿಸುವ ಛಲ ಹೊಂದಿರುವ ಬಿಕಾನೇರ್ ನ ಅನುರಾಧಾ ಎಂ ಸೀಲ್ ನಲ್ಲಿ ಉಡುಪು ತಯಾರಿಸಿದ್ದಾಳೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲೂ ಅನುರಾಧಾ ಹೆಸರು ಸೇರಿದೆ. ಬಿಕಾನೇರ್ ನ ಸುದರ್ಶನ ನಗರ ನಿವಾಸಿ ಅನುರಾಧ  ಎಲ್.ಎಲ್.ಎಂ ಅಭ್ಯಾಸ ಮಾಡ್ತಿದ್ದಾಳೆ. ಸತತ 24 ದಿನಗಳ ಕಾಲ 10-12 ಗಂಟೆಗಳ ನಿರಂತರ ಪ್ರಯತ್ನದ ನಂತ್ರ ಅನುರಾಧ ಬಟ್ಟೆ ತಯಾರಿಸಿದ್ದಾಳೆ. ಇದಕ್ಕೆ ಸುಮಾರು 12 ಸಾವಿರ ಖರ್ಚು ಬಂದಿದೆಯಂತೆ.

ಅನುರಾಧ 81 ಸೆಂಟಿಮೀಟರ್  ಉದ್ದ ಹಾಗೂ 83.3 ಸೆಂಟಿಮೀಟರ್ ಅಗಲದ ಲೆಹಂಗಾ, 30.4 ಸೆಂಟಿಮೀಟರ್ ಉದ್ದ ಹಾಗೂ 66 ಸೆಂಟಿಮೀಟರ್ ಅಗಲದ ಬ್ಲೌಸ್ ತಯಾರಿಸಿದ್ದಾಳೆ. 144.7 ಸೆಂಟಿಮೀಟರ್ ಉದ್ದ ಹಾಗೂ 15.2 ಸೆಂಟಿಮೀಟರ್ ಅಗಲದ ದುಪಟ್ಟಾ ತಯಾರಿಸಿದ್ದಾಳೆ.ಇದಕ್ಕಿಂತ ಮೊದಲು ಅನುರಾಧ ಎಂ ಸೀಲ್ ಮೂಲಕ 50 ಕ್ಕೂ ಹೆಚ್ಚು ಆಭರಣ ತಯಾರಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...