alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷಾ ಪ್ರವೇಶ ಪತ್ರ ಕಂಡು ಬೆಚ್ಚಿ ಬಿದ್ಲು ಹುಡುಗಿ

ಬಿಹಾರದ ವಿಶ್ವವಿದ್ಯಾನಿಲಯವೊಂದು ಮತ್ತೊಮ್ಮೆ ಯಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ವಿದ್ಯಾರ್ಥಿನಿಯೊಬ್ಬಳ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬಿಕಿನಿ ತೊಟ್ಟ ಬೆಡಗಿಯೊಬ್ಬಳ ಚಿತ್ರ ಹಾಕಲಾಗಿದ್ದು, ಪ್ರವೇಶ ಪತ್ರ ಕಂಡು ವಿದ್ಯಾರ್ಥಿನಿ ಬೆಚ್ಚಿ ಬಿದ್ದಿದ್ದಾಳೆ.

ದರ್ಭಾಂಗಾ ಜಿಲ್ಲೆಯ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾನಿಲಯದಲ್ಲಿ ಈ ಪ್ರಮಾದ ನಡೆದಿದ್ದು, ಮಧುಬನಿಯ ಎಸ್ಎಂಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಳು.

ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಆಕೆ ತನ್ನ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದು, ಅದರಲ್ಲಿದ್ದ ಫೋಟೋ ಕಂಡು ಬೆಚ್ಚಿ ಬಿದ್ದಿದ್ದಾಳೆ. ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿನಿಯ ವಿವರ, ಸಹಿ ಎಲ್ಲವೂ ಸರಿಯಿದ್ದು, ಫೋಟೋ ಮಾತ್ರ ಬಿಕಿನಿ ತೊಟ್ಟ ಬೆಡಗಿಯೊಬ್ಬಳದ್ದಾಗಿತ್ತು.

ಕೂಡಲೇ ಆಕೆ ಈ ವಿಚಾರವನ್ನು ಸಂಬಂಧಿಸಿದವರ ಗಮನಕ್ಕೆ ತಂದಿದ್ದು, ಆಕೆಗೆ ಬೇರೆ ಪ್ರವೇಶ ಪತ್ರ ನೀಡಲು ವಿಶ್ವವಿದ್ಯಾನಿಲಯ ಮುಂದಾಗಿದೆ. ಇದೇ ವಿಶ್ವವಿದ್ಯಾನಿಲಯ ಕಳೆದ ವರ್ಷ ಕೃಷ್ಣಕುಮಾರ್ ರಾಯ್ ಎಂಬ ವಿದ್ಯಾರ್ಥಿಗೆ ವಿತರಿಸಿದ್ದ ಪರೀಕ್ಷಾ ಪ್ರವೇಶ ಪತ್ರದಲ್ಲಿ ಗಣಪತಿಯ ಫೋಟೋ ಕಂಡು ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...