alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರ ವಿವಿಯಲ್ಲಿ ಗಣೇಶನಿಗೂ ಸಿಕ್ಕಿದೆ ಪ್ರವೇಶ ಪತ್ರ

ಬಿಹಾರದ ಯೂನಿವರ್ಸಿಟಿಯಲ್ಲಿ ವಿಘ್ನ ನಿವಾರಕ ಗಣೇಶ ಕೂಡ ಪರೀಕ್ಷೆ ಬರೆಯುತ್ತಿದ್ದಾನೆ. ದರ್ಭಂಗಾ ಜಿಲ್ಲೆಯಲ್ಲಿರುವ ಲಲಿತ್ ನಾರಾಯಣ್ ಮಿಥಿಲಾ ಯೂನಿವರ್ಸಿಟಿ, ಜೆಎನ್ ಕಾಲೇಜಿನ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿ ಕೃಷ್ಣನ್ ಕುಮಾರ್ ರಾಯ್ ಗೆ ಅಡ್ಮಿಟ್ ಕಾರ್ಡ್ ವಿತರಿಸಿದೆ.

ಅದರಲ್ಲಿ ಗಣಪತಿಯ ಫೋಟೋ ಹಾಕಲಾಗಿದೆ. ಪರೀಕ್ಷಾ ಪ್ರವೇಶ ಪತ್ರದಲ್ಲಿ ಯೂನಿವರ್ಸಿಟಿ ಸಿಬ್ಬಂದಿ ಮಾಡಿರೋ ಯಡವಟ್ಟಿನಿಂದಾಗಿ ಅದನ್ನು ಸರಿಪಡಿಸಲು ವಿದ್ಯಾರ್ಥಿ ತಿಂಗಳುಗಟ್ಟಲೆ ಅಲೆದಿದ್ದಾನೆ. ವಿದ್ಯಾರ್ಥಿ ಪರೀಕ್ಷೆಯ ಫಾರ್ಮ್ ಅನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಿದ್ದ.

ಆ ಸೈಬರ್ ಕೆಫೆಯಲ್ಲಿ ಈ ರೀತಿ ಆಗಿರಬಹುದು ಅಂತಾ ಯೂನಿವರ್ಸಿಟಿ ಜಾರಿಕೊಳ್ಳುವ ಪ್ರಯತ್ನ ಮಾಡಿದೆ. ಕೊನೆಗೂ ಖುದ್ದು ಪ್ರಾಂಶುಪಾಲರು ಪರಿಶೀಲನೆ ಮಾಡಿ ಸಿಬ್ಬಂದಿಯಿಂದಾದ ಪ್ರಮಾದವನ್ನು ಸರಿಪಡಿಸಿದ್ದಾರೆ. ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...