alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ದಾಖಲೆ ಕೊಟ್ಟಿದ್ದ ಟಾಪರ್ ಕೈಗೆ ಬಿತ್ತು ಕೋಳ

bihar-exam_650x400_71496320981

ಗಣೇಶ್ ಕುಮಾರ್ ಈ ವರ್ಷ ಬಿಹಾರದ 12ನೇ ತರಗತಿಯ ಬೋರ್ಡ್ ಎಕ್ಸಾಮ್ ನಲ್ಲಿ ಟಾಪರ್ ಆಗಿದ್ದ. ಬ್ರಿಲಿಯಂಟ್ ವಿದ್ಯಾರ್ಥಿ ಎನಿಸಿಕೊಂಡಿದ್ದ ಇವನನ್ನು ಮಾಧ್ಯಮದವರೆಲ್ಲ ಸಂದರ್ಶನ ಮಾಡಿದಾಗ ಅಸಲಿಯತ್ತು ಬಯಲಾಗಿದೆ. ಯಾಕಂದ್ರೆ ಗಣೇಶ್ ಕುಮಾರ್ ಕೂಡ ಕಳೆದ ವರ್ಷದ ಟಾಪರ್ ರೂಬಿ ರೈನಂತೆ ಉತ್ತರ ಹೇಳಲು ತಡಬಡಾಯಿಸಿದ್ದಾನೆ.

ತನಗೆ 24 ವರ್ಷ ಅಂತಾ ಗಣೇಶ್ ಕುಮಾರ್ ದಾಖಲೆಗಳಲ್ಲಿ ನಮೂದಿಸಿದ್ದಾನೆ. ಆದ್ರೀಗ ಅವನಿಗೆ 42 ವರ್ಷ ವಯಸ್ಸಾಗಿದೆ. ಇಬ್ಬರು ಮಕ್ಕಳ ತಂದೆ ಇವನು. ಆದ್ರೆ ಸುಳ್ಳು ದಾಖಲೆ ನೀಡಿ ವಂಚಿಸಿದ್ದ. ಈತನ ವಿರುದ್ಧ ಬಿಹಾರ ಶಾಲಾ ಪರೀಕ್ಷಾ ಮಂಡಳಿ ದೂರು ದಾಖಲಿಸಿದೆ. ಪೊಲೀಸರು ವಂಚನೆ ಆರೋಪದ ಮೇಲೆ ಗಣೇಶ್ ಕುಮಾರ್ ನನ್ನು ಬಂಧಿಸಿದ್ದಾರೆ.

ಕಳೆದ ವರ್ಷದ ಟಾಪರ್ ರೂಬಿ ರೈ, ಪೊಲಿಟಿಕಲ್ ಸೈನ್ಸ್ ಅಂದ್ರೆ ಅಡುಗೆಗೆ ಸಂಬಂಧಿಸಿದ ವಿಷಯ ಅಂತಾ ಹೇಳಿದ್ಲು. ಈ ಬಾರಿ ಸಂಗೀತ ವಿಷಯದಲ್ಲಿ ಗಣೇಶ್ ಕುಮಾರ್ 70ಕ್ಕೆ 65 ಅಂಕ ಪಡೆದಿದ್ದಾನೆ. ಟಿವಿ ಸಂದರ್ಶನವೊಂದ್ರಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ‘ಮೈಥಿಲಿ ಕೋಕಿಲಾ’ ಅಂತಾ ಕರೆಯಲಾಗುತ್ತದೆ ಎಂದಿದ್ದ.

ಸಂಗೀತದ ಮೂಲ ಜ್ಞಾನವಾದ ಸುರ್, ತಾಲ್, ಮಾತ್ರಾ ಇವ್ಯಾವುದರ ಬಗ್ಗೆ ಸ್ವಲ್ಪವೂ ಅವನಿಗೆ ತಿಳಿದಿಲ್ಲ. ಹಾಡು ಹೇಳು ಅಂದಿದ್ದಕ್ಕೆ ಬಾಲಿವುಡ್ ಸಾಂಗ್ ಅನ್ನೇ ಕೆಟ್ಟದಾಗಿ ಹೇಳಿದ್ದ. ಜಗದೀಪ್ ನಾರಾಯಣ ಹೈಸ್ಕೂಲ್ ನಿಂದ ಈತ ಪರೀಕ್ಷೆ ಬರೆದಿದ್ದು, ಶೇ.82.6 ಅಂಕ ಪಡೆದಿದ್ದಾನೆ. ಆದ್ರೆ ಇದರಲ್ಲಿ ಅಕ್ರಮ ನಡೆದಿರೋದು ಮೇಲ್ನೋಟಕ್ಕೆ ಸಾಬೀತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...