alex Certify
ಕನ್ನಡ ದುನಿಯಾ       Mobile App
       

Kannada Duniya

ಆಶ್ರಯ ಮನೆಯಲ್ಲಿ 16 ಬಾಲಕಿಯರ ಮೇಲೆ ಅತ್ಯಾಚಾರ

ಬಿಹಾರದ ಮುಜಾಫರ್ಪುರ್ ನ ಬಾಲಕಿಯರ ಆಶ್ರಯ ಮನೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಪೀಡಿತ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿ ಆಶ್ರಯ ಮನೆ ಆವರಣದಲ್ಲಿ ಹೂಳಿದ್ದಾರೆ ಎಂದಿದ್ದಾಳೆ.

ಈ ಮಾಹಿತಿ ನಂತ್ರ ಪೊಲೀಸರು ಶವ ಹುಡುಕಾಟ ನಡೆಸಿದ್ದಾರೆ. ಈವರೆಗೂ ಯಾವುದೇ ಶವ ಸಿಕ್ಕಿಲ್ಲವೆಂದು ಪೊಲೀಸ್ ಮೂಲಗಳು ಹೇಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 10 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಮುಜಾಫರ್ಪುರದ ಸೇವಾ ಸಂಕಲ್ಪ ಮತ್ತು ವಿಕಾಸ ಸಮಿತಿ ಹೆಸರಿನ ಬಾಲಕಿಯರ ಆಶ್ರಯ ಮನೆಯಲ್ಲಿ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಡೆಸಿದ ಸೋಶಿಯಲ್ ಅಡಿಟ್ ವೇಳೆ ಈ ವಿಷ್ಯ ಬಹಿರಂಗವಾಗಿದೆ. ವಿಷ್ಯ ತಿಳಿದ ನಂತ್ರ 21 ಬಾಲಕಿಯರ ವೈದ್ಯಕೀಯ ತಪಾಸಣೆ ನಡೆದಿದೆ. 16 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದು ಬಹಿರಂಗವಾಗಿದೆ. ಆಶ್ರಯ ಮನೆಯಲ್ಲಿ ಕೆಲಸ ಮಾಡುವ 7 ಮಹಿಳೆಯರನ್ನೂ ಬಂಧಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...