alex Certify
ಕನ್ನಡ ದುನಿಯಾ       Mobile App
       

Kannada Duniya

ರೇಪ್ ಮಾಡಿದ್ರೇ ಏನ್ ಮಾಡ್ತಿಯಾ..? ಶಾಸಕನ ಪ್ರಶ್ನೆ

lalan-yadav

ಪಾಟ್ನಾ: ರೇಪ್ ಎಂದರೆ ಏನು ಗೊತ್ತಾ..? ನಿನ್ನ ಮೇಲೆ ರೇಪ್ ಆದ್ರೆ ಏನ್ ಮಾಡ್ತಿಯಾ..? ರಕ್ತ ಎಲ್ಲಿಂದ ಬರುತ್ತೆ ಗೊತ್ತಾ..?

ಹೀಗೆ ಅಸಂಬದ್ಧವಾಗಿ ಹಾಸ್ಟೆಲ್ ಬಾಲಕಿಯನ್ನು ಪ್ರಶ್ನಿಸಿದ್ದು, ಬಿಹಾರದ ಶಾಸಕ ಲಾಲನ್ ಪಾಸ್ವಾನ್. ರಾಷ್ಟ್ರೀಯ ಲೋಕ ಸಮತಾ ಪಕ್ಷದ ಚೆನಾರಿ ಕ್ಷೇತ್ರದ ಶಾಸಕರಾಗಿರುವ ಲಾಲನ್ ಪಾಸ್ವಾನ್ ವೈಶಾಲಿ ಜಿಲ್ಲೆಯ ಬಾಲಕಿಯರ ವಸತಿ ಶಾಲೆ, ಹಾಸ್ಟೆಲ್ ಗೆ ಭೇಟಿ ನೀಡಿದ್ದಾಗ ಇಂತಹ ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಹಾಸ್ಟೆಲ್ ನಲ್ಲಿದ್ದ ಬಾಲಕಿಯ ಶವ, ಸಮೀಪದಲ್ಲೇ ಪತ್ತೆಯಾಗಿತ್ತು. ಆಕೆಯ ಬಟ್ಟೆಗಳು ರಕ್ತಮಯವಾಗಿದ್ದ ಕಾರಣ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದೆಂಬ ಆರೋಪ ಕೇಳಿ ಬಂದಿತ್ತು.

ಇದನ್ನು ವಿಚಾರಿಸಲು ಹಾಸ್ಟೆಲ್ ಗೆ ಹೋಗಿದ್ದ ಲಾಲನ್ ಪಾಸ್ವಾನ್ ಬಾಲಕಿಯರಿಗೆ ಅಸಂಬದ್ಧವಾಗಿ ಪ್ರಶ್ನೆ ಕೇಳಿ ಮುಜುಗರಕ್ಕೀಡು ಮಾಡಿದ್ದಾರೆ.

ಬಾಲಕಿಯನ್ನು ಕೊಂದವನ ಬಗ್ಗೆ ಇಲ್ಲಿನ ಕೆಲವರಿಗೆ ಮಾಹಿತಿ ಇದ್ದರೂ ಇರಬಹುದು ಎಂದೆಲ್ಲಾ ಹೇಳಿದ್ದಾರೆ. ಶಾಸಕರ ಹೇಳಿಕೆ ವಿಡಿಯೋ ವೈರಲ್ ಆಗಿದ್ದು, ಅವರ ಪ್ರಶ್ನೆಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...