alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯ ಕಟ್ಟುವ ನೆಪದಲ್ಲಿ ಲಕ್ಷ ಲಕ್ಷ ಹಣ ಲೂಟಿ…!

ಬಿಹಾರದಲ್ಲಿ ವ್ಯಕ್ತಿಯೊಬ್ಬ ಶೌಚಾಲಯ ಕಟ್ಟುವ ನೆಪದಲ್ಲಿ ಸರ್ಕಾರಕ್ಕೇ ವಂಚಿಸಿದ್ದಾನೆ. ಸುಮಾರು 42 ಟಾಯ್ಲೆಟ್ ಕಟ್ಟಲು ಸಾಕಾಗುವಷ್ಟು ಹಣವನ್ನು ಪಡೆದಿದ್ದಾನೆ. ವಿಷ್ಣುಪುರ ರಾಮ್ ಗ್ರಾಮದ ನಿವಾಸಿ ಯೋಗೇಶ್ವರ್ ಚೌಧರಿ ಸರ್ಕಾರದ ಅನುದಾನವನ್ನು ನೀರಿನಂತೆ ಖರ್ಚು ಮಾಡಿದ್ದಾನೆ.

ಶೌಚಾಲಯ ಕಟ್ಟುವ ನೆಪದಲ್ಲಿ ಈತ ಬೇರೆ ಬೇರೆ ಹೆಸರಿನ ಗುರುತಿನ ಚೀಟಿಗಳನ್ನು ಬಳಸಿ ಅನುದಾನದ ಹಣ ಪಡೆದಿದ್ದಾನೆ. ಈತ ಪಡೆದಿರೋ ಹಣ 4,40,800 ರೂಪಾಯಿ. ಸಾಮಾಜಿಕ ಕಾರ್ಯಕರ್ತ ರೋಹಿತ್ ಕುಮಾರ್ ಎಂಬಾತ ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ.

ಯೋಗೇಶ್ವರ್ ಸರ್ಕಾರದ ಅನುದಾನ ಪಡೆದಿರೋದು 2015ರಲ್ಲಿ. ಇದೊಂದು ಹಳೆಯ ಪ್ರಕರಣ. ಮತ್ತೆ ಅಂತಹ ಅಕ್ರಮವೆಸಗಿದ್ರೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬಿಹಾರ ಸರ್ಕಾರ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಾಣಕ್ಕಾಗಿ 12,000 ರೂಪಾಯಿ ಅನುದಾನ ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...