alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರದಲ್ಲಿ ಮಿಡ್ ನೈಟ್ ಪೊಲಿಟಿಕಲ್ ಹೈಡ್ರಾಮಾ

nitish-dd

ಪಾಟ್ನಾ: ಬಿಹಾರದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಹಾಘಟ್ ಬಂಧನ್ ಮೈತ್ರಿ ಕಡಿದುಕೊಂಡ ಜೆ.ಡಿ.ಯು. ನಾಯಕ ನಿತೀಶ್ ಕುಮಾರ್, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದ ನಿತೀಶ್ ಅವರಿಗೆ ಬಿ.ಜೆ.ಪಿ. ಬೇಷರತ್ ಬೆಂಬಲ ಸೂಚಿಸಿದ್ದು, ತಡರಾತ್ರಿಯೇ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಾಗಿದೆ.

132 ಶಾಸಕರ ಬೆಂಬಲ ಇರುವುದರಿಂದ ನಿತೀಶ್ ಕುಮಾರ್ ಅವರಿಗೆ ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರು ಸೂಚಿಸಿದ್ದಾರೆ.

ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿಯಾಗಿ ಬಿ.ಜೆ.ಪಿ. ನಾಯಕ ಸುಶೀಲ್ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಿತೀಶ್ ನಡೆಯಿಂದ ಆಕ್ರೋಶಗೊಂಡಿರುವ ಆರ್.ಜೆ.ಡಿ. ತಡರಾತ್ರಿಯೇ ಪ್ರತಿಭಟನೆ ನಡೆಸಿದೆ. ಆರ್.ಜೆ.ಡಿ.ಗೆ ಕಾಂಗ್ರೆಸ್ ಬೆಂಬಲ ನೀಡಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಆರ್.ಜೆ.ಡಿ.ಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿದೆ.ನಿತೀಶ್ ಕುಮಾರ್ ವಿರುದ್ಧ ಆರ್.ಜೆ.ಡಿ. ಕಾರ್ಯಕರ್ತರು ರಾತ್ರಿಯೇ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

243 ಸದಸ್ಯ ಬಲದ ಬಿಹಾರದಲ್ಲಿ ಆರ್.ಜೆ.ಡಿ. -80, ಜೆ.ಡಿ.ಯು. -81, ಕಾಂಗ್ರೆಸ್ -27, ಬಿ.ಜೆ.ಪಿ. -57, ಇತರೆ -12 ಸದಸ್ಯರಿದ್ದಾರೆ. ಬಹುಮತಕ್ಕೆ 122 ಸದಸ್ಯರ ಬೆಂಬಲ ಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...