alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನು ಮುಂದೆ ಕಳ್ಳಭಟ್ಟಿ ತಯಾರಿಸಿದರೆ ಜೈಲಲ್ಲ, ಗಲ್ಲು

BL10_STATES_NITISH_2768253f

ಈಗಾಗಲೇ ಮದ್ಯ ಮಾರಾಟ ನಿಷೇಧಿಸುವ ಮೂಲಕ ಭೇಷ್ ಎನಿಸಿಕೊಂಡಿರುವ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ, ಇದೀಗ ಕಳ್ಳಭಟ್ಟಿ ತಯಾರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಹೌದು. ಮದ್ಯ ನಿಷೇಧವಾದರೂ ಸಹ ಕಳ್ಳಭಟ್ಟಿ ದುರಂತಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಲು ಮುಂದಾಗಿದ್ದು ಇನ್ನು ಮುಂದೆ ಕಳ್ಳಭಟ್ಟಿ ತಯಾರಿಸುವವರಿಗೆ ಗಲ್ಲು ಶಿಕ್ಷೆ ವಿಧಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಈ ಕುರಿತ ಮಸೂದೆಯನ್ನು ಪ್ರಸಕ್ತ ನಡೆಯುತ್ತಿರುವ ಬಜೆಟ್ ಅಧಿವೇಶನದ ವೇಳೆಯೇ ಆಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ 2016 ರ ಏಪ್ರಿಲ್ 1 ರಿಂದ ಬಿಹಾರದಲ್ಲಿ ದೇಶಿಯ ಮದ್ಯ ಮಾರಾಟ ನಿಷೇಧ ಕಾನೂನು ಜಾರಿ ಮಾಡಲು ನಿತೀಶ್ ಕುಮಾರ್ ಸರ್ಕಾರ ಆದೇಶ ಹೊರಡಿಸಿತ್ತು. ಈ ನಡುವೆ ಇದೀಗ ಕಳ್ಳ ಭಟ್ಟಿ ತಯಾರಿಕೆ ಮಾಡುವವರ ವಿರುದ್ದ ಕಠಿಣ ನಿಲುವು ತಾಳುವ ಮೂಲಕ ದಿಟ್ಟ ಹೆಜ್ಜೆಯನ್ನಿರಿಸಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...