alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಗಾಯಕಿಯ ಬೆನ್ನು ಬಿದ್ದವನೀಗ ಪೊಲೀಸರ ಅತಿಥಿ…!

ಖ್ಯಾತ ಬಾಲಿವುಡ್ ಗಾಯಕಿಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಮುಂಬೈನ ಅಂಬೋಲಿ ಪೊಲೀಸರು ಬಂಧಿಸಿದ್ದಾರೆ. 30 ವರ್ಷದ ರಾಜೇಶ್ ಕುಮಾರ್ ಶುಕ್ಲಾ ಬಂಧಿತ ಆರೋಪಿಯಾಗಿದ್ದು, ಈತ ಹಲವು ದಿನಗಳಿಂದ 26 ವರ್ಷದ ಗಾಯಕಿಯ ಬೆನ್ನು ಬಿದ್ದಿದ್ದನೆನ್ನಲಾಗಿದೆ.

ನಿರುದ್ಯೋಗಿಯಾಗಿದ್ದ ರಾಜೇಶ್ ಕುಮಾರ್, ಆನ್ ಲೈನ್ ಮೂಲಕ ಗಾಯಕಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದು, ಕರೆ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದುದ್ದಲ್ಲದೇ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದನೆನ್ನಲಾಗಿದೆ.

ಗಾಯಕಿಯ ಅಭಿಮಾನಿ ಎಂದು ಹೇಳಿಕೊಂಡಿದ್ದ ಆತ ಭೇಟಿ ಮಾಡುವ ಸಲುವಾಗಿ ಎರಡು ವಾರಗಳ ಹಿಂದೆ ಮುಂಬೈಗೆ ಬಂದಿದ್ದನೆನ್ನಲಾಗಿದೆ. ಗಾಯಕಿ ನಿವಾಸದ ಸುತ್ತ ಅಡ್ಡಾಡಿಕೊಂಡಿದ್ದ ರಾಜೇಶ್ ಕುಮಾರ್ ತನ್ನನ್ನು ಭೇಟಿಯಾಗದಿದ್ದರೆ ಸರಿಯಿರುವುದಿಲ್ಲವೆಂದು ಕರೆ ಮಾಡಿ ಬೆದರಿಕೆ ಹಾಕಿದ್ದು, ಆ ಬಳಿಕ ಗಾಯಕಿಯ ತಾಯಿ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಮೊಬೈಲ್ ಸಂಖ್ಯೆ ಆಧಾರದ ಮೇಲೆ ರಾಜೇಶ್ ಕುಮಾರ್ ಶುಕ್ಲಾನನ್ನು ಪತ್ತೆ ಮಾಡಿದ್ದು, ಛತ್ರಪತಿ ಶಿವಾಜಿ ರೈಲು ನಿಲ್ದಾಣದ ಬಳಿ ಅಡ್ಡಾಡುತ್ತಿದ್ದ ವೇಳೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...