alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂನಲ್ಲಿ ಸಿಕ್ಕಿದೆಯಂತೆ 2000 ರೂ. ನಕಲಿ ನೋಟು !

sbi_1481779491

2000 ರೂಪಾಯಿಯ ಹೊಸ ನೋಟು ಬಿಡುಗಡೆಯಾದ ಬೆನ್ನಲ್ಲೇ ನಕಲಿ ದಂಧೆ ಕೂಡ ಶುರುವಾಗಿತ್ತು. ಕೆಲವರು ನೋಟನ್ನು ಝೆರಾಕ್ಸ್ ಮಾಡಿ ವಂಚಿಸಿದ ಪ್ರಕರಣ ಹಲವೆಡೆ ಬೆಳಕಿಗೆ ಬಂದಿದೆ. ಆದ್ರೆ ಬಿಹಾರದಲ್ಲಿ ಎಟಿಎಂ ಒಂದರಲ್ಲಿ ನಕಲಿ 2000 ರೂಪಾಯಿ ನೋಟು ಬಂದಿರೋದು ಆತಂಕಕ್ಕೆ ಕಾರಣವಾಗಿದೆ.

ಬಿಹಾರದ ಸೀತಾಮರ್ಹಿ ಜಿಲ್ಲೆಯ ಪಂಕಜ್ ಕುಮಾರ್ ಎಂಬುವವರಿಗೆ ಎಟಿಎಂನಲ್ಲಿ 2000 ರೂ. ನಕಲಿ ನೋಟು ಸಿಕ್ಕಿದೆಯಂತೆ. ಶನಿವಾರ ಸಿಮ್ರಾ ಗ್ರಾಮದಲ್ಲಿರುವ ಎಸ್ ಬಿ ಐ ಎಟಿಎಂನಿಂದ ಪಂಕಜ್ 2000 ರೂಪಾಯಿ ನೋಟನ್ನು ವಿತ್ ಡ್ರಾ ಮಾಡಿದ್ದಾರೆ. ಭಾನುವಾರ ಯಾರಿಗೋ ಅದನ್ನು ಕೊಟ್ಟಿದ್ದಾರೆ, ನಕಲಿ ಅನ್ನೋ ಕಾರಣಕ್ಕೆ ಅವರು ನೋಟು ಸ್ವೀಕರಿಸಿಲ್ಲ.

ಈ ಬಗ್ಗೆ ಪೊಲೀಸರು ಕೂಡ ದೂರು ದಾಖಲಿಸಿಕೊಂಡಿದ್ದಾರೆ. ಎಟಿಎಂಗಳಿಗೆ ಹಣ ತುಂಬಿಸುವ ಕೆಲಸವನ್ನು ಖಾಸಗಿ ಕಂಪನಿಗೆ ಹೊರಗುತ್ತಿಗೆ ಕೊಡಲಾಗಿದ್ದು, ಎಟಿಎಂನಲ್ಲಿ ತುಂಬಿಸಿರುವ ನೋಟುಗಳನ್ನು ಪರಿಶೀಲಿಸುವುದಾಗಿ ಬ್ಯಾಂಕ್ ಹೇಳಿದೆ. ಆದ್ರೆ ಪಂಕಜ್ ಗೆ ನಕಲಿ ನೋಟು ಎಟಿಎಂನಲ್ಲಿ ಬಂದಿರಲಿಕ್ಕಿಲ್ಲ, ಬೇರೆ ಯಾರೋ ವಂಚಿಸಿರಬೇಕು ಅನ್ನೋದು ಬ್ಯಾಂಕ್ ನವರ ಅನುಮಾನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...