alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಮಾಡಿದ್ದೇನು…?

ಬಿಹಾರದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಮಗಾಗಿ ಆಯೋಜನೆಯಾಗಿದ್ದ ಪಾರ್ಟಿ ವೇಳೆ ಸಂಭ್ರಮಾಚರಣೆಗಾಗಿ ತಮ್ಮ ಅಧಿಕೃತ ಸರ್ವೀಸ್ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

2006 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಸಿದ್ದಾರ್ಥ್ ಮೋಹನ್ ಜೈನ್ ಸಂಕಷ್ಟಕ್ಕೊಳಗಾದ ಅಧಿಕಾರಿಯಾಗಿದ್ದು, ಮಂಗಳವಾರ ಸಂಜೆ ಕತಿಯಾರ್ ನ ಗಾಲ್ಫ್ ಮೈದಾನದಲ್ಲಿ ನಡೆಯುತ್ತಿದ್ದ ಪಾರ್ಟಿ ಸಂದರ್ಭದಲ್ಲಿ ಸಿದ್ದಾರ್ಥ್ ತಮ್ಮ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದರು.

ಕಳೆದ ಎರಡು ವರ್ಷಗಳಿಂದ ಕತಿಯಾರ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದಾರ್ಥ್ ಮೋಹನ್ ಜೈನ್, ಕೆಲ ದಿನಗಳ ಹಿಂದೆ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದು, ಸಿಬಿಐ ನಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು. ಕತಿಯಾರ್ ಜಿಲ್ಲಾಧಿಕಾರಿಯಾಗಿದ್ದ ಮಿಥಿಲೇಶ್ ಮಿಶ್ರಾರಿಗೂ ವರ್ಗಾವಣೆಯಾಗಿದ್ದು, ಈ ಹಿನ್ನಲೆಯಲ್ಲಿ ಇಬ್ಬರಿಗೂ ಬೀಳ್ಕೊಡುಗೆ ನೀಡಲು ಪಾರ್ಟಿ ಆಯೋಜನೆಯಾಗಿತ್ತು.

ಸಂಭ್ರಮಾಚರಣೆಗಾಗಿ ಸಿದ್ದಾರ್ಥ್ ಮೋಹನ್ ಜೈನ್ ತಮ್ಮ ರಿವಾಲ್ವರ್ ಹೊರ ತೆಗೆದು ಗುಂಡುಗಳು ಖಾಲಿಯಾಗುವವರೆಗೂ ಹಾರಿಸಿದ್ದರು. ಪಾರ್ಟಿಯಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಇದನ್ನು ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಹಾರ ಸರ್ಕಾರ, ಸಿದ್ದಾರ್ಥ್ ಮೋಹನ್ ಜೈನ್ ರ ಕೇಂದ್ರ ಸೇವೆ ನಿಯೋಜನೆಯನ್ನು ತಡೆ ಹಿಡಿದಿದೆ. ಅಲ್ಲದೇ ಘಟನೆ ಕುರಿತು ಉನ್ನತ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...