alex Certify
ಕನ್ನಡ ದುನಿಯಾ       Mobile App
       

Kannada Duniya

ಮೌಖಿಕ ಆದೇಶ ಪಾಲಿಸುವುದಿಲ್ಲವೆಂದ ಐಎಎಸ್ ಅಧಿಕಾರಿಗಳು

bihar-ias-officers-protest-arrest-of-colleague-over-exam-paper-leakಬಿಹಾರದಲ್ಲಿ ಸರ್ಕಾರ ಹಾಗೂ ಐಎಎಸ್ ಅಧಿಕಾರಿಗಳ ನಡುವೆ ಸಂಘರ್ಷ ಆರಂಭವಾಗಿದೆ. ಬಿಹಾರ್ ಸ್ಟಾಪ್ ಸೆಲೆಕ್ಷನ್ ಕಮೀಷನ್ ಚೇರ್ಮನ್ ಸುಧೀರ್ ಕುಮಾರ್ ರನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿನ್ನಲೆಯಲ್ಲಿ ಬಂಧಿಸಿರುವುದನ್ನು ಖಂಡಿಸಿ ಭಾನುವಾರದಂದು ರಾಜ್ಯಪಾಲರನ್ನು ಭೇಟಿ ಮಾಡಿರುವ ಐಎಎಸ್ ಅಧಿಕಾರಿಗಳು, ತಕ್ಷಣ ಮಧ್ಯ ಪ್ರವೇಶಿಸಿ ಸುಧೀರ್ ಕುಮಾರ್ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನ್ಯಾಯಯುತವಾಗಿ ಹಾಗೂ ನಿರ್ಭಿತಿಯಿಂದ ಕಾರ್ಯ ನಿರ್ವಹಿಸುವ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಬೇಕು ಎಂದಿರುವ ಐಎಎಸ್ ಅಧಿಕಾರಿಗಳ ನಿಯೋಗ, ಮುಖ್ಯಮಂತ್ರಿ ಸೇರಿದಂತೆ ಸಚಿವರ ಮೌಖಿಕ ಆದೇಶಗಳನ್ನು ಕಾರ್ಯಗತಗೊಳಿಸುವುದಿಲ್ಲವೆಂದು ಹೇಳಿದೆ.

ಬರವಣಿಗೆಯಲ್ಲಿ ನೀಡಿದ ಆದೇಶಗಳನ್ನು ಮಾತ್ರ ಪಾಲಿಸುವುದಾಗಿ ರಾಜ್ಯಪಾಲ ರಾಮನಾಥ್ ಗೋವಿಂದ್ ರನ್ನು ಭೇಟಿ ಮಾಡಿದ ವೇಳೆ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಜನವರಿಯಲ್ಲಿ ನಡೆದಿದ್ದ ದೋಣಿ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಮಹಮ್ಮದ್ ಆಲಿ ಅನ್ಸಾರಿಯವರನ್ನು ಸಸ್ಪೆಂಡ್ ಮಾಡಿ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಇದಕ್ಕೂ ತಡೆಯೊಡ್ಡಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...