alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣ ತೆಗೀತು ಕೋಲ್ಡ್ ಡ್ರಿಂಕ್ ವಿಚಾರಕ್ಕೆ ನಡೆದ ಗಲಾಟೆ

ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ಕೋಲ್ಡ್ ಡ್ರಿಂಕ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪಾನ್ ಅಂಗಡಿ ಮಾಲೀಕನ ಜೊತೆ ಗಲಾಟೆಗಿಳಿದ ದುಷ್ಕರ್ಮಿಗಳು ಹೊಡೆದು ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 60 ವರ್ಷದ ದನಜಿ ಖುಷವಾಹ ಮೃತ ವ್ಯಕ್ತಿ.

ಸೋಮವಾರ ಸಂಜೆ ನಾಲ್ವರು ಪಾನ್ ಅಂಗಡಿಯಲ್ಲಿ ಕೋಲ್ಡ್ ಡ್ರಿಂಕ್ಸ್ ಖರೀದಿ ಮಾಡಿದ್ದಾರೆ. ಹಣದ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಜಗಳವಾಡ್ತಿದ್ದವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ನಾಲ್ವರು ಪಾನ್ ಅಂಗಡಿ ಮಾಲೀಕನಿಗೆ ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಹೊಡೆತ ತಿಂದು ಬಿದ್ದಿದ್ದ ದನಜಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆಗೆ ಸ್ಪಂದಿಸದ ದನಜಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕೂಡ ಇಂಥಹದ್ದೇ ಘಟನೆ ನಡೆದಿತ್ತು. 150 ರೂಪಾಯಿಗೆ ಯುವಕನಿಗೆ ಚಾಕು ಇರಿದಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...