alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರ ಮುಖ್ಯಮಂತ್ರಿಗೆ ಚಪ್ಪಲಿ ಏಟು

nitish-kumar-slipperಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರದಂದು ‘ಜನತಾ ದರ್ಶನ’ ಮಾಡುವ ವೇಳೆ ಯುವಕನೊಬ್ಬ ಅವರತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ. ಯುವಕ ಎಸೆದ ಚಪ್ಪಲಿ ತಮ್ಮ ಮೇಲೆ ಬಿದ್ದಿದ್ದನ್ನು ನಿತೀಶ್ ಕುಮಾರ್ ಖಚಿತಪಡಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದ ನಿವಾಸದಲ್ಲಿ ಜನತಾ ದರ್ಶನ ನಡೆಸುತ್ತಿದ್ದ ವೇಳೆ ಏಕಾಏಕಿ ತನ್ನ ಕಾಲಿನ ಚಪ್ಪಲಿ ತೆಗೆದ ಯುವಕ ಅವರ ಮೇಲೆ ತೂರಿದ್ದಾನೆ. ಇದು ಅವರ ಎದೆಗೆ ತಾಗಿದೆ ಎನ್ನಲಾಗಿದೆ.

ಕೂಡಲೇ ಪೊಲೀಸರು ಯುವಕನನ್ನು ಬಂಧಿಸಿದ್ದು, ಆತ ಕಾಲಿನ ಚಪ್ಪಲಿ ತೆಗೆಯುತ್ತಿದ್ದ ವೇಳೆ ಈ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್, ಆತ ಎಸೆದ ಚಪ್ಪಲಿ ತಮಗೆ ತಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಹಿಂದೆಯೂ ಇದೇ ವರ್ತನೆ ತೋರಿದ್ದ ಯುವಕ, ಬಿಜೆಪಿ ಮುಖಂಡ, ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರ ‘ಜನತಾ ದರ್ಬಾರ್’ ನಲ್ಲಿ ಚಪ್ಪಲಿ ತೂರಿದ್ದನೆನ್ನಲಾಗಿದೆ. ಬಂಧಿತನ ವಿಚಾರಣೆ ವೇಳೆ, ನಿತೀಶ್ ಕುಮಾರ್ ಅವರ ಸರ್ಕಾರ, ಅಗ್ನಿ ಅನಾಹುತ ತಡೆಗಟ್ಟಲು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಒಲೆ ಉರಿಸದಂತೆ ಆದೇಶ ಜಾರಿ ಮಾಡಿರುವ ಹಿನ್ನಲೆಯಲ್ಲಿ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದನೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...