alex Certify
ಕನ್ನಡ ದುನಿಯಾ       Mobile App
       

Kannada Duniya

ನಿತೀಶ್ ಕುಮಾರ್ ಗೆ ಅಗ್ನಿ ಪರೀಕ್ಷೆ

nitish-bih

ಪಾಟ್ನಾ: ಬುಧವಾರ ಸಂಜೆ ರಾಜೀನಾಮೆ ನೀಡಿ, ಗುರುವಾರ ಬೆಳಿಗ್ಗೆ ಮತ್ತೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರಿಗೆ ಶುಕ್ರವಾರ ಅಗ್ನಿ ಪರೀಕ್ಷೆ ಎದುರಾಗಿದೆ.

ಆರ್.ಜೆ.ಡಿ. ಮೈತ್ರಿ ಕಡಿದುಕೊಂಡು ಬಿ.ಜೆ.ಪಿ. ಜೊತೆ ಸೇರಿ, ನಿತೀಶ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದು, ಇಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಶಾಸಕರ ಬೆಂಬಲ ಬೇಕಿದೆ. ಜೆ.ಡಿ.ಯು. 71, ಎನ್.ಡಿ.ಎ. 58, ಆರ್.ಜೆ.ಡಿ. 80, ಕಾಂಗ್ರೆಸ್ 27, ಇತರೆ 7 ಮಂದಿ ಸದಸ್ಯರಿದ್ದಾರೆ.

ನಿತೀಶ್ ಕುಮಾರ್ ಪರವಾಗಿ 129 ಸದಸ್ಯರ ಬೆಂಬಲ ಇದ್ದು, ಅಗ್ನಿ ಪರೀಕ್ಷೆಯಲ್ಲಿ ಅವರು ಪಾಸಾಗಲಿದ್ದಾರೆ. ಆದರೆ, ನಿತೀಶ್ ಮತ್ತೆ ಎನ್.ಡಿ.ಎ. ಜತೆ ಕೈ ಜೋಡಿಸಿರುವುದಕ್ಕೆ ಜೆ.ಡಿ.ಯು.ನ ಒಂದು ಬಣ ಆಕ್ಷೇಪ ವ್ಯಕ್ತಪಡಿಸಿದೆ.

ಇನ್ನು ಅತಿ ದೊಡ್ಡ ಪಕ್ಷವಾಗಿರುವ ಆರ್.ಜೆ.ಡಿ.ಗೆ ಸರ್ಕಾರ ರಚನೆಗೆ ಅವಕಾಶ ನೀಡದ ರಾಜ್ಯಪಾಲರ ಕ್ರಮವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಪಕ್ಷದ ನಾಯಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...