alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಾಜ್ಯದಲ್ಲಿ ಪಿಯುಸಿ ಬರೆದ ಶೇ.64ರಷ್ಟು ವಿದ್ಯಾರ್ಥಿಗಳು ಫೇಲ್

bihar_board_result_2017_1496130323_749x421

ಬಿಹಾರ ಸ್ಕೂಲ್ ಎಜುಕೇಷನ್ ಬೋರ್ಡ್ 12ನೇ ತರಗತಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ. ಆತಂಕಕಾರಿ ವಿಷಯವೆಂದ್ರೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಶೇಕಡಾ 64 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 70 ವಿದ್ಯಾರ್ಥಿಗಳು, ಕಲಾ ವಿಭಾಗದಲ್ಲಿ ಶೇಕಡಾ 63 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 26 ವಿದ್ಯಾರ್ಥಿಗಳಿ ಫೇಲ್ ಆಗಿದ್ದಾರೆ.

ಈ ವರ್ಷ ಉಳಿದ ರಾಜ್ಯಗಳ ಪಿಯುಸಿ ಫಲಿತಾಂಶಕ್ಕೆ ಹೋಲಿಸಿದ್ರೆ ಬಿಹಾರ ವಿದ್ಯಾರ್ಥಿಗಳ ಫಲಿತಾಂಶ ಅತ್ಯಂತ ಕೆಟ್ಟದಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 31.11, ಕಲಾ ವಿಭಾಗದಲ್ಲಿ 37.13 ಹಾಗೂ ವಾಣಿಜ್ಯ ವಿಭಾಗದಲ್ಲಿ 73.76 ವಿದ್ಯಾರ್ಥಿಗಳು ಮಾತ್ರ ಪಾಸ್ ಆಗಿದ್ದಾರೆ.

ನಕಲಿ ತಡೆಗೆ ಎಜುಕೇಷನ್ ಬೋರ್ಡ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಫಲಿತಾಂಶ ಈ ರೀತಿ ಬಂದಿದೆ ಎಂದು ಬೋರ್ಡ್ ಪ್ರತಿಕ್ರಿಯೆ ನೀಡಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶೇಕಡಾ 86.2 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...