alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಕ್ಯಾಶ್ ವ್ಯಾನ್ ನಲ್ಲಿ ಸಾಗಿಸಲಾಗುತ್ತಿತ್ತು ಮದ್ಯ

liquor-4455ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮ ಕೈಗೊಂಡಿದ್ದರೂ ಕಾಳ ಧನಿಕರು ಮಾತ್ರ ಕೆಲ ಭ್ರಷ್ಟ ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ ತಮ್ಮಲ್ಲಿರುವ ಕೋಟ್ಯಾಂತರ ರೂ. ಕಪ್ಪು ಹಣವನ್ನು ಸರಾಗವಾಗಿ ಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡಿರುವ ಹಲವಾರು ಪ್ರಕರಣಗಳು ಈಗಾಗಲೇ ಬಹಿರಂಗವಾಗಿವೆ.

ಈ ಮಧ್ಯೆ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸಿರುವುದನ್ನೇ ಮತ್ತೊಂದು ಅಕ್ರಮ ಕಾರ್ಯಕ್ಕೆ ಬಳಕೆಯಾಗಿರುವ ಪ್ರಕರಣ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ, ರಾಜ್ಯದಲ್ಲಿ ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಅಕ್ರಮ ದಂಧೆಕೋರರು ಬ್ಯಾಂಕ್ ಸ್ಟಿಕ್ಕರ್ ಹಾಕಿಕೊಂಡು ಹರ್ಯಾಣದಿಂದ ಮದ್ಯ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಾದ ಬಳಿಕ ಅಂಬುಲೆನ್ಸ್ ನಲ್ಲಿ ಮದ್ಯ ಸಾಗಿಸುತ್ತಿದ್ದ ಖದೀಮರು, 500 ಹಾಗೂ 1000 ರೂ. ನೋಟು ನಿಷೇಧಗೊಳ್ಳುತ್ತಿದ್ದಂತೆಯೇ ವಾಹನದ ಮೇಲೆ ಬ್ಯಾಂಕ್ ಸ್ಟಿಕ್ಕರ್ ಹಾಕಿಕೊಂಡು 155 ಬಾಕ್ಸ್ ಗಳಲ್ಲಿ ಅಕ್ರಮ ಮದ್ಯ ಸಾಗಿಸುತ್ತಿರುವ ಪ್ರಕರಣ ದರ್ಭಾಂಗಾ ಜಿಲ್ಲೆಯಲ್ಲಿ ಬಯಲಾಗಿದೆ. ಪೊಲೀಸರ ತಪಾಸಣೆ ವೇಳೆ ಇವರುಗಳು ಸಿಕ್ಕಿ ಬಿದ್ದಿದ್ದು, ಈ ವಾಹನ ಬ್ಯಾಂಕ್ ಗೆ ಸಂಬಂಧಪಟ್ಟಿದ್ದೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...