alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಬಟ್ಟೆ ಹರಿದು ಅವಮಾನಿಸಿದ ಸ್ವಾಮಿ ಓಂ..!

om-759

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸ್ವಾಮಿ ಓಂ ವಿರುದ್ಧ ಮಹಿಳೆಯೊಬ್ಳು ಪ್ರಕರಣ ದಾಖಲಿಸಿದ್ದಾಳೆ. ಸ್ವಾಮಿ ಓಂ ಮತ್ತವರ ಬೆಂಬಲಿಗ ಸಂತೋಷ್ ಆನಂದ್ ತನ್ನ ಬಟ್ಟೆಗಳನ್ನು ಹರಿದು ದೌರ್ಜನ್ಯ ಎಸಗಿದ್ದಾರೆ ಅಂತಾ ಪೊಲೀಸರಿಗೆ ದೂರು ನೀಡಿದ್ದಾಳೆ.

ಫೆಬ್ರವರಿ 7 ರಂದು ದೆಹಲಿಯ ರಾಜ್ಘಾಟ್ ನಲ್ಲಿ ಸ್ವಾಮಿ ಓಂ ಮತ್ತು ಸಂತೋಷ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಬಟ್ಟೆಯನ್ನು ಹರಿದು ಹಾಕಿ ಸಾರ್ವಜನಿಕರ ಎದುರೇ ಅಪಮಾನಿಸಿದ್ದಾರೆ ಅಂತಾ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮನ್ನು ವಿರೋಧಿಸಿದ್ರೆ ತಕ್ಕಶಾಸ್ತಿ ಮಾಡುವುದಾಗಿ ಸ್ವಾಮಿ ಓಂ ಬೆದರಿಸಿದ್ದಾರಂತೆ.

ಸಹಾಯಕ್ಕಾಗಿ ಮಹಿಳೆ ಕಿರುಚಿಕೊಂಡಾಗ ಇಬ್ಬರೂ ಸ್ಥಳದಿಂದ ಪಲಾಯನ ಮಾಡಿದ್ದಾರೆ ಅಂತಾ ಮಹಿಳೆ ಆರೋಪಿಸಿದ್ದಾಳೆ. ಐಪಿಸಿ ಸೆಕ್ಷನ್ 354ರ ಅಡಿ ಸ್ವಾಮಿ ಓಂ ಮತ್ತವರ ಬೆಂಬಲಿಗನ ವಿರುದ್ಧ ಪ್ರಕರಣ ದಾಖಲಿಸಿದ್ದು, ಸೋಮವಾರ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಎದುರು ಪೊಲೀಸರು ಹಾಜರುಪಡಿಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...