alex Certify
ಕನ್ನಡ ದುನಿಯಾ       Mobile App
       

Kannada Duniya

ಏಕರೂಪದ ಡಿಎಲ್ ನಿಂದ ಆಗಲಿದೆ ಇಷ್ಟೆಲ್ಲಾ ಪ್ರಯೋಜನ

ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಿ.ಎಸ್.ಟಿ. ಬಂದಾಯ್ತು. ಏಕರೂಪದ ದಸ್ತಾವೇಜು ತೆರಿಗೆ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಇದರ ಜೊತೆಗೆ ಇದೀಗ ಏಕರೂಪದ ಡ್ರೈವಿಂಗ್ ಲೈಸೆನ್ಸ್(ಡಿ.ಎಲ್.) ಮತ್ತು ವಾಹನ ನೋಂದಣಿ(ಆರ್ ಸಿ) ಅನ್ನು ಜಾರಿಗೆ ತರುವ ಬಗ್ಗೆಯೂ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ 2019ರ ಜುಲೈನಿಂದ ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ಗಾತ್ರ, ಒಂದೇ ವಿನ್ಯಾಸ, ಭದ್ರತಾ ಲಕ್ಷಣಗಳುಳ್ಳ ಡಿ.ಎಲ್., ಮತ್ತು ಆರ್.ಸಿ. ಜಾರಿಗೆ ಬರಲಿದೆ. ಈ ಸ್ಮಾರ್ಟ್ ಕಾರ್ಡ್ ಗಳಲ್ಲಿ ಎನ್ಎಫ್ಸಿ(ನಿಯರ್ ಫೀಲ್ಡ್ ಕಮ್ಯೂನಿಕೇಶನ್)ಗೆ ಸಹಾಯಕವಾಗುವ ಮೈಕ್ರೋಚಿಪ್ ಗಳನ್ನು ಅಳವಡಿಸಲಾಗುತ್ತಿದೆ.

ಇದರಿಂದ ಪೊಲೀಸರು ದೇಶದ ಯಾವ ಮೂಲೆಯಲ್ಲಿ ನಿಂತು ಸಹ ಚಾಲಕನ ಜಾತಕವನ್ನೇ ತೆಗೆಯಬಹುದು. ಅಷ್ಟು ಮಾತ್ರವಲ್ಲದೆ ಅಪಘಾತದಿಂದ ಮೃತಪಟ್ಟ ವ್ಯಕ್ತಿಯು ತನ್ನ ಅಂಗಾಂಗಗಳನ್ನು ದಾನ ಮಾಡಲು ಇಚ್ಛಿಸಿದ್ದನೇ ಎಂದು ಡಿಎಲ್ ನಲ್ಲಿ ನಮೂದಿಸಲ್ಪಟ್ಟಿರುವ ಮಾಹಿತಿಯ ಸಹಾಯದಿಂದ ತಿಳಿದುಕೊಳ್ಳಬಹುದು.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...