alex Certify
ಕನ್ನಡ ದುನಿಯಾ       Mobile App
       

Kannada Duniya

19 ವರ್ಷ ಹಿಂದಿನ ಹತ್ಯಾಕಾಂಡ ಪ್ರಕರಣ: ಸಿಎಂ ಯೋಗಿಗೆ ಶಾಕ್

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗೆ ಭಾರೀ ಹಿನ್ನೆಡೆಯಾಗಿದೆ. 19 ವರ್ಷಗಳ ಹಿಂದಿನ ಹತ್ಯಾಕಾಂಡವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಯೋಗಿ ಆದಿತ್ಯನಾಥ್ ರಿಗೆ ನೊಟೀಸ್ ನೀಡಿದೆ. ನೊಟೀಸ್ ಗೆ ಉತ್ತರ ನೀಡಲು ಯೋಗಿಗೆ ಕೋರ್ಟ್ ಒಂದು ವಾರಗಳ ಸಮಯ ನೀಡಿದೆ.

ಸಿಎಂ ಯೋಗಿ ವಿರುದ್ಧ ಮೊದಲ ಪ್ರಕರಣ ಮಹಾರಾಜ್ಗಂಜ್ ಕೋಟ್ವಾಲಿಯಲ್ಲಿ ದಾಖಲಾಗಿದೆ. ಸ್ಮಶಾನ ಹಾಗೂ ಕೊಳದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯದ ಮಧ್ಯೆ ಗಲಾಟೆ ನಡೆದಿತ್ತು. 1999, ಫೆಬ್ರವರಿ 10 ರಂದು ಪ್ರತಿಭಟನೆ ವೇಳೆ ಇಬ್ಬರು ಸಾವನ್ನಪ್ಪಿದ್ದರು. ಗುಂಪಿನ ಮುಖ್ಯಸ್ಥ ಯೋಗಿ ಆದಿತ್ಯನಾಥ್ ಗುಂಡು ಹಾರಿಸಿದ್ದಾರೆಂದು ಎಸ್ಪಿ ನಾಯಕರು ದೂರಿದ್ದರು.

2018 ರಲ್ಲಿ ಪ್ರಕರಣದ ಮರುಪರಿಶೀಲನೆ ನಡೆಸಿದ ಕೋರ್ಟ್ ಸಾಕ್ಷಿ ಕೊರತೆಯಿಂದ ಪ್ರಕರಣದ ವಿಚಾರಣೆಯನ್ನು ಕೈಬಿಟ್ಟಿತ್ತು. ಅಜೀಜ್, ಲಕ್ನೋ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪುನಃ ವಿಚಾರಣೆ ನಡೆಸುವಂತೆ ಸೆಷನ್ಸ್ ಕೋರ್ಟ್ ಗೆ ನಿರ್ದೇಶಿಸಿತ್ತು. ಈಗಿನ ಬೆಳವಣಿಗೆಯಲ್ಲಿ ಜಿಲ್ಲಾ ಸೆಷೆನ್ಸ್ ಕೋರ್ಟ್ ಯೋಗಿ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ನೊಟೀಸ್ ಜಾರಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...