alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪತ್ನಿ

ಭೋಪಾಲ್ ಡಿಬಿ ಮಾಲ್ ನ ಮೂರನೇ ಮಹಡಿಯಿಂದ ಬಿದ್ದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತ ಮಹಿಳೆ ತನ್ನ ಜೊತೆ ಆರು ವರ್ಷದ ಮಗುವನ್ನು ಕರೆದುಕೊಂಡು ಬಂದಿದ್ದಳು ಎನ್ನಲಾಗಿದೆ.

ಮಾಹಿತಿ ಪ್ರಕಾರ ಟೆಕ್ಸ್ಟೈಲ್ ವ್ಯಾಪಾರಿ ಸಂಜಯ್ ಮಿತ್ತಲ್ ಪತ್ನಿ ರೇಣುಕಾ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬ್ಯಾಂಕ್ ಗೆ ಹೋಗುವುದಾಗಿ ಹೇಳಿ 6 ವರ್ಷದ ಮಗಳ ಜೊತೆ ರೇಣುಕಾ ಮನೆ ಬಿಟ್ಟಿದ್ದಾಳೆ . ಬ್ಯಾಂಕ್ ಕೆಲಸ ಮುಗಿಸಿ ಮಾಲ್ ಗೆ ಬಂದ ರೇಣುಕಾ ಶಾಪಿಂಗ್ ಮಾಡಿದ್ದಾಳೆ. ನಂತ್ರ 5 ಗಂಟೆಗೆ ಪತಿಗೆ ಕರೆ ಮಾಡಿ ಮಾಲ್ ಗೆ ಬರುವಂತೆ ಹೇಳಿದ್ದಾಳೆ. ಫೋನ್ ಕರೆ ಮುಗಿಸಿ ಮಹಡಿಯಿಂದ ಕೆಳಗೆ ಹಾರಿದ್ದಾಳೆ. ಈ ಎಲ್ಲ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಘಟನೆ ನಂತ್ರ ಆರು ವರ್ಷದ ಮಗಳು ತುಂಬಾ ಹೆದರಿದ್ದಾಳೆ. ಮನೆಯಲ್ಲಿ ಯಾವುದೇ ಗಲಾಟೆ ನಡೆದಿರಲಿಲ್ಲ. ಹೀಗಿದ್ದು ರೇಣುಕಾ ಯಾಕೆ ಈ ನಿರ್ಧಾರ ಕೈಗೊಂಡಳು ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...