alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ ಗ್ರೇಡ್ ಸಿನಿಮಾದಲ್ಲಿ ನಟಿಸಿದ್ದ ಯುವತಿಯನ್ನು ಬಂಧಿಸಿಟ್ಟಿದ್ದ ಭೂಪ

ಭೋಪಾಲ್ ನಲ್ಲಿ ಹುಡುಗಿಯೊಬ್ಬಳನ್ನು ಪ್ರೇಮಿ ಮನೆಯಲ್ಲಿಯೇ ಬಂಧನ ಮಾಡಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. ಯುವತಿ ಮಾಡೆಲ್ ಆಗಿದ್ದಲ್ಲದೆ ಸಿ ಗ್ರೇಡ್ ಚಿತ್ರಗಳಲ್ಲಿ ನಟಿಸಿದ್ದಳು ಎನ್ನಲಾಗಿದೆ. ಯುವತಿಯ ಅನೇಕ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಕಾಸ್ಟಿಂಗ್ ನಲ್ಲಿ ಕೂಡ ಆಕೆ ಹೆಸರು ಬರೆಯಲಾಗಿದೆ.

ರೋಹಿತ್ ಎರಡು ದಿನಗಳ ಹಿಂದಷ್ಟೇ ಭೋಪಾಲ್ ಗೆ ಬಂದಿದ್ದ. ತಂದೆ ಬಳಿ ಹಣ ನೀಡುವಂತೆ ಗಲಾಟೆ ಮಾಡಿ ಮನೆ ಬಿಟ್ಟಿದ್ದ. ನಂತ್ರ ಹುಡುಗಿ ಮನೆಗೆ ಬಂದು ಆಕೆಯನ್ನು ಆಕೆ ಮನೆಯಲ್ಲಿಯೇ ಬಂಧಿಸಿಟ್ಟಿದ್ದ. ವಿಚಾರಣೆ ವೇಳೆ ರೋಹಿತ್ ತಪ್ಪೊಪ್ಪಿಕೊಂಡಿದ್ದಾನೆ. ಆದ್ರೆ ತಾನು ಮಾಡಿದ ಕೆಲಸದ ಬಗ್ಗೆ ಪಶ್ಚಾತಾಪವಿಲ್ಲ ಎಂದಿದ್ದಾನೆ. ಮದುವೆಯಾದ್ರೆ ಆಕೆಯನ್ನೇ ಎಂದು ರೋಹಿತ್ ಹೇಳಿದ್ದಾನೆ.

ಯುವತಿಯನ್ನು ತುಂಬಾ ಪ್ರೀತಿಸುತ್ತೇನೆ. ಹಾಗಾಗಿ ಆಕೆಯನ್ನು ಬಂಧಿಸಿಟ್ಟಿದ್ದೆ. ಬ್ಯಾಗನ್ನು ಅಲಿಗಢದಲ್ಲಿ ಖರೀದಿ ಮಾಡಿದ್ದೆ ಎಂದಿದ್ದಾನೆ. ಜೈಲಿನಲ್ಲಿ ಕೂಡ ಐಷಾರಾಮಿ ಬಯಸುತ್ತಿರುವ ರೋಹಿತ್ ತನಗೆ ಬೇಕಾದ ಆಹಾರವನ್ನು ತರಿಸಿಕೊಂಡು ತಿನ್ನುತ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...