alex Certify
ಕನ್ನಡ ದುನಿಯಾ       Mobile App
       

Kannada Duniya

ದಿಗ್ವಿಜಯ್ ಸೋಲಿನ ನಂತ್ರ ಜಲ ಸಮಾಧಿಗೆ ಅನುಮತಿ ಕೋರಿದ ಮಿರ್ಚಿ ಬಾಬಾ

दिग्विजय के लिए 'मिर्ची हवन' करने वाले बाबा जल समाधि लेने को तैयार, कलेक्टर से मांगी इजाजत

ಭೋಪಾಲ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗೆಲುವು ಸಾಧಿಸುತ್ತಾರೆಂದು ಭವಿಷ್ಯ ಹೇಳಿ ಹವನ ಮಾಡಿದ್ದ ಬಾಬಾ ಜಲ ಸಮಾಧಿಗೆ ಅನುಮತಿ ಕೋರಿದ್ದಾರೆ. ಬಾಬಾ ವೈರಗಾನಂದ್ ಗಿರಿ ಭೋಪಾಲ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಕಾಮಾಕ್ಯ ದೇವಸ್ಥಾನದಲ್ಲಿ (ಅಸ್ಸಾಂ) ಸೇವೆ ಸಲ್ಲಿಸುತ್ತಿದ್ದು, ಜೂನ್ 16ರ 2 ಗಂಟೆ 11 ನಿಮಿಷಕ್ಕೆ ಜಲ ಸಮಾಧಿ ಪಡೆಯಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.

ಕಳೆದ ತಿಂಗಳು ನಡೆದ ಲೋಕಸಭೆ ಚುನಾವಣೆ ವೇಳೆ, ವೈರಗಾನಂದ್ ಮಹತ್ವದ ಘೋಷಣೆಯೊಂದನ್ನು ಮಾಡಿದ್ದರು. ದಿಗ್ವಿಜಯ್ ಸಿಂಗ್, ಚುನಾವಣೆಯಲ್ಲಿ ಗೆಲುವು ಸಾಧಿಸದೆ ಹೋದಲ್ಲಿ ಸಮಾಧಿ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಲೋಕಸಭೆ ಚುನಾವಣೆ ಫಲಿತಾಂಶ ಬಾಬಾ ವಿರುದ್ಧ ಬಂದಿದೆ. ದಿಗ್ವಿಜಯ್ ಸಿಂಗ್ ಸೋಲುತ್ತಿದ್ದಂತೆ ವೈರಗಾನಂದ್ ನಾಪತ್ತೆಯಾಗಿದ್ದರು.

ದಿಗ್ವಿಜಯ್ ಸಿಂಗ್ ಗೆಲುವಿಗಾಗಿ ವೈರಗಾನಂದ್ ಬಾಬಾ ಅಲಿಯಾಸ್ ಮಿರ್ಚಿ ಬಾಬಾ, ಮಿರ್ಚಿ ಹವನ ಮಾಡಿದ್ದರು. ಮಿರ್ಚಿ ಹವನ ಮಾಡಿದ್ರೆ ದಿಗ್ವಿಜಯ್ ಗೆಲುವು ನಿಶ್ಚಿತವೆಂದು ಬಾಬಾ ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...