alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಗೆ ಅತ್ಯಾಚಾರ ಬೆದರಿಕೆಯೊಡ್ಡಿದ್ದ ಆರೋಪಿ ಅರೆಸ್ಟ್

ಭೋಜ್ಪುರಿ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರದ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭೋಜ್ಪುರಿ ನಟಿಗೆ ಕಿರುಕುಳ ನೀಡ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಈತನನ್ನು ನಟಿ ಗಂಭಿರವಾಗಿ ಪರಿಗಣಿಸಿರಲಿಲ್ಲ. ಆದ್ರೆ ಅತ್ಯಾಚಾರದ ಬೆದರಿಕೆಯೊಡ್ಡುತ್ತಿದ್ದಂತೆ ನಟಿ ಪೊಲೀಸರಿಗೆ ದೂರು ನೀಡಿದ್ದರು.

ಆರಂಭದಲ್ಲಿ ಆರೋಪಿ, ನಟಿ ಫೋಟೋಗಳಿಗೆ ಅಶ್ಲೀಲ ಕಮೆಂಟ್ ಮಾಡ್ತಿದ್ದನಂತೆ. ನಟಿ ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಲ ದಿನಗಳ ನಂತ್ರ ಅತ್ಯಾಚಾರದ ಧಮಕಿ ಹಾಕಿದ್ದನಂತೆ. ಜೊತೆಗೆ ನಟಿ ಪತಿಗೆ ಕೂಡ ಮೆಸ್ಸೇಜ್ ಕಳುಹಿಸಿದ್ದನಂತೆ. ನಟಿ ನನ್ನ ಜೊತೆ ಸಂಬಂಧ ಬೆಳೆಸುವವರೆಗೆ ನೀನು ತೃಪ್ತಿಹೊಂದಲು ಸಾಧ್ಯವಿಲ್ಲ ಎಂದಿದ್ದನಂತೆ.

ಇದಾದ ನಂತ್ರ ನಟಿ ಪೊಲೀಸರಿಗೆ ದೂರು ನೀಡಿದ್ದಳು ಎನ್ನಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...