alex Certify
ಕನ್ನಡ ದುನಿಯಾ       Mobile App
       

Kannada Duniya

111 ವರ್ಷಗಳ ಮೊದಲು ವಿದೇಶದಲ್ಲಿ ಧ್ವಜ ಹಾರಿಸಿದ್ರು ಈ ಮಹಿಳೆ

ಇಂದು ಭಿಕಾಜಿ ಕಾಮಾ (ಮೇಡಂ ಕಾಮಾ )ಅವ್ರ 82ನೇ ಪುಣ್ಯತಿಥಿ. ಅವ್ರು ಆಗಸ್ಟ್ 13,1936 ರಲ್ಲಿ ನಿಧನರಾದ್ರು. ಭಾರತದ ಕ್ರಾಂತಿಕಾರಿ ಹೋರಾಟದಲ್ಲಿ ಮೇಡಂ ಕಾಮಾ ಹೆಸರು ಚಿರಪರಿಚಿತ. ವಿದೇಶದಲ್ಲಿದ್ದೂ ಭಾರತೀಯ ಕ್ರಾಂತಿಕಾರಿಗಳಲ್ಲಿ ಉತ್ಸಾಹ ತುಂಬುತ್ತಿದ್ದರು. ಅವ್ರ ಬರಹ ಹಾಗೂ ಭಾಷಣಗಳು ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಗಿದ್ದವು.

ಆಗಸ್ಟ್ 22,1907ರಲ್ಲಿ ಜರ್ಮನಿಯ ಸ್ಟಟ್ಗಾರ್ಟ್ ನಗರದಲ್ಲಿ ನಡೆದ ‘ಅಂತರರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್’ನಲ್ಲಿ ಧ್ವಜ ಹಾರಿಸಿದ್ದರು. ಸೀರೆಯುಟ್ಟಿದ್ದ ಕಾಮಾ, ಧ್ವವನ್ನು ಎತ್ತಿ ಹಿಡಿದು ಭಾರತ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕಾಗಿ ಅವ್ರನ್ನು ಈಗಲೂ ನೆನಪಿಸಿಕೊಳ್ಳಲಾಗುತ್ತದೆ. ಧ್ವಜ ಹಾರಿಸುವುದು ಈಗಿನಷ್ಟು ಸುಲಭವಾಗಿರಲಿಲ್ಲ.

ಮೇಡಂ ಕಾಮಾ ಪಾರ್ಸಿ ಕುಟುಂಬದಲ್ಲಿ ಸೆಪ್ಟೆಂಬರ್ 24,1861ರಲ್ಲಿ ಜನಿಸಿದ್ದರು. ಇಂಗ್ಲೀಷ್ ಮಾಧ್ಯಮದಲ್ಲಿ ಅಧ್ಯಯನ ನಡೆಸಿದ ಕಾಮಾ, ಶ್ರೀ ರುಸ್ತುಂ ಕೆ.ಆರ್. ಅವ್ರನ್ನು ಮದುವೆಯಾಗಿದ್ದರು. ಆದ್ರೆ ಇಬ್ಬರ ಅಭಿಪ್ರಾಯಗಳು ಭಿನ್ನವಾಗಿದ್ದವು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ಹೋರಾಟ ಮೇಡಂ ಕಾಮಾ ಅವ್ರದ್ದಾಗಿತ್ತು. ದಾದಾಭಾಯಿ ನವರೋಜಿ ಆಪ್ತ ಕಾರ್ಯದರ್ಶಿಯಾಗಿಯೂ ಅವ್ರು ಕೆಲಸ ಮಾಡಿದ್ದರು.

ಜರ್ಮನಿಯಲ್ಲಿ ಮೇಡಂ ಕಾಮಾ ಹಾರಿಸಿದ್ದ ಧ್ವಜದ ಬಣ್ಣ ಹಸಿರು, ಕೇಸರಿ ಹಾಗೂ ಕೆಂಪು ಬಣ್ಣದಲ್ಲಿತ್ತು. ಧೈರ್ಯದ ಸಂಕೇತವಾಗಿ ಹಸಿರು, ವಿಜಯದ ಸಂಕೇತವಾಗಿ ಕೇಸರಿ ಹಾಗೂ ಶಕ್ತಿ ಸಂಕೇತವಾಗಿ ಕೆಂಪು ಬಣ್ಣದ ಧ್ವಜವನ್ನು ಕಾಮಾ ಹಿಡಿದಿದ್ದರು. 8 ರಾಜ್ಯಗಳ ಸಂಕೇತವಾಗಿ 8 ಕಮಲದ ಹೂವಿನ ಚಿತ್ರವಿತ್ತು. ದೇವನಾಗರಿ ಲಿಪಿಯಲ್ಲಿ ವಂದೇ ಮಾತರಂ ಬರೆಯಲಾಗಿತ್ತು. ಈ ಧ್ವಜವನ್ನು ವೀರ ಸಾವರ್ಕರ್ ಇತರ ಕ್ರಾಂತಿಕಾರಿಗಳ ಜೊತೆ ಸೇರಿ ತಯಾರಿಸಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...