alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸ್ಮಿಲ್ಲಾ ಖಾನ್ ರ ಶಹನಾಯಿ ಕದ್ದವನು ಸಿಕ್ಕಿ ಬಿದ್ದ

ustad

ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ಹಾಗೂ ಇಬ್ಬರು ಆಭರಣ ವ್ಯಾಪಾರಿಗಳನ್ನು ವಿಶೇಷ ಟಾಸ್ಕ್ ಫೋರ್ಸ್ ಪೊಲೀಸರು ಬಂಧಿಸಿದ್ದಾರೆ. ವಾರಣಾಸಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಬಿಸ್ಮಿಲ್ಲಾ ಖಾನ್ ಮೊಮ್ಮಗ ನಜ್ರೆ ಹಸನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಳವಾಗಿದ್ದ 4 ಬೆಳ್ಳಿಯ ಶಹನಾಯಿಗಳಲ್ಲಿ ಮೂರನ್ನು ಪೊಲೀಸರು ಈಗಾಗ್ಲೇ ವಶಪಡಿಸಿಕೊಂಡಿದ್ದಾರೆ, ಆದ್ರೆ ಅವನ್ನೆಲ್ಲ ಜ್ಯುವೆಲ್ಲರ್ ಗಳು ಕರಗಿಸಿಬಿಟ್ಟಿದ್ದರು. ಶಹನಾಯಿ ಕರಗಿಸಿ ಮಾಡಿದ 1.066 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈತುಂಬಾ ಸಾಲ ಮಾಡಿಕೊಂಡಿದ್ದ ಬಿಸ್ಮಿಲ್ಲಾ ಖಾನ್ ರ ಮೊಮ್ಮಗ ನಜ್ರೆ, ಅದನ್ನು ತೀರಿಸಲು ಶಹನಾಯಿಗಳನ್ನು ಕದ್ದಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಶಹನಾಯಿಗಳನ್ನು ಆತ ಜ್ಯುವೆಲ್ಲರ್ ಗಳಾದ ಶಂಕರಲಾಲ್ ಸೇಠ್ ಹಾಗೂ ಸುಜಿತ್ ಸೇಠ್ ಗೆ ಮಾರಿದ್ದ. ನಜ್ರೆ ಹಸನ್ ಬಳಿಯಿದ್ದ 4200 ರೂಪಾಯಿ ಹಣವನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಆತ ನೀಡಿದ ಮಾಹಿತಿ ಮೇರೆಗೆ ಆಭರಣ ವ್ಯಾಪಾರಿಗಳನ್ನು ಬಂಧಿಸಿದ್ದಾರೆ. ಮಾಜಿ ಪ್ರಧಾನಿ ನರಸಿಂಹ ರಾವ್, ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಉಡುಗೊರೆಯಾಗಿ ಬಿಸ್ಮಿಲ್ಲಾ ಖಾನ್ ಅವರಿಗೆ ನೀಡಿದ್ದ ಶಹನಾಯಿಗಳನ್ನು ಮೊಮ್ಮಗನೇ ಕಳವು ಮಾಡಿದ್ದ. ಡಿಸೆಂಬರ್ 5ರಂದು ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...