alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಧಾರ್ಮಿಕ ಗುರು ಭಯ್ಯೂಜಿ ಮಹಾರಾಜ್ ಆತ್ಮಹತ್ಯೆಗೆ ಕಾರಣ

ಧಾರ್ಮಿಕ ಗುರು ಭಯ್ಯೂಜಿ ಮಹಾರಾಜ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿದೆ. ಆತ್ಮಹತ್ಯೆಗೆ ಒತ್ತಡ ಕಾರಣವೆಂದು ಭಯ್ಯೂಜಿ ಮಹಾರಾಜ್ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ಭಯ್ಯೂಜಿ ಮಹಾರಾಜ್ ಮಂಗಳವಾರ ಇಂದೋರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವ್ರ ಆಶ್ರಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.

ಸದ್ಯ ಭಯ್ಯೂಜಿ ಮಹಾರಾಜ್ ಡೆತ್ ನೋಟ್ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವ್ರಿಗೆ ಯಾವ ಒತ್ತಡವಿತ್ತು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಧ್ಯಮಗಳ ಪ್ರಕಾರ ಭಯ್ಯೂಜಿ ಮಹಾರಾಜ್ ಮೊದಲ ಪತ್ನಿ ಸಾವಿನ ನಂತ್ರ ಎರಡನೇ ಮದುವೆಯಾಗಿದ್ದರಂತೆ. ಮೊದಲ ಪತ್ನಿ ಹಾಗೂ ಮಗಳ ಮಧ್ಯೆ ಸಂಬಂಧ ಸರಿಯಿರಲಿಲ್ಲವಂತೆ. ಇದೇ ಕಾರಣಕ್ಕೆ ಮಗಳು ಪುಣೆಗೆ ಹೋಗಿದ್ದಳಂತೆ.

ಮಂಗಳವಾರ ಪುಣೆಯಿಂದ ಬಂದಿದ್ದಳು ಎನ್ನಲಾಗಿದೆ. ಭಯ್ಯೂಜಿ ಮಹಾರಾಜ್ ಮಗಳ ಪರ ಮಾತನಾಡ್ತಿದ್ದರು ಎನ್ನಲಾಗಿದೆ. ಇದು ಪತ್ನಿಗೆ ಇಷ್ಟವಾಗ್ತಿರಲಿಲ್ಲವಂತೆ. ಇದೇ ಒತ್ತಡದಲ್ಲಿ ಭಯ್ಯೂಜಿ ಮಹಾರಾಜ್ ಮಗಳ ರೂಮಿನಲ್ಲಿಯೇ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...