alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ವಂಚನೆಯ ಮತ್ತೊಂದು ವಿಧಾನ

delivery-boy 3344ಆನ್ ಲೈನ್ ಶಾಪಿಂಗ್ ಗೆ ಜನ ಇಂದು ಮರುಳಾಗುತ್ತಿದ್ದಾರೆ. ಕುಳಿತಲ್ಲೇ ತಾವು ಬಯಸಿದ ವಸ್ತುವನ್ನು ಬುಕ್ ಮಾಡಿ ಮನೆಗೆ ತರಿಸಿಕೊಳ್ಳುವ ಸೌಲಭ್ಯಕ್ಕೆ ಮಾರು ಹೋಗುತ್ತಿದ್ದಾರೆ. ಅದರಲ್ಲೂ ಕ್ಯಾಶ್ ಆನ್ ಡೆಲಿವರಿ, ಇಎಂಐ ಮೊದಲಾದ ಅನುಕೂಲತೆಗಳಿರುವ ಕಾರಣ ಆನ್ ಲೈನ್ ಶಾಪಿಂಗ್ ಜನಪ್ರಿಯವಾಗುತ್ತಿದೆ.

ಆದರೆ ಕ್ಯಾಶ್ ಆನ್ ಡೆಲಿವರಿ ಮೂಲಕ ವಸ್ತುಗಳನ್ನು ತರಿಸಿಕೊಂಡ ವೇಳೆಯೂ ಮೋಸ ಹೋಗುವ ಸಾಧ್ಯತೆಯಿರುತ್ತದೆ ಎಂಬುದನ್ನು ಈ ವಿಡಿಯೋ ನಿರೂಪಿಸಿದೆ. ಹೈದ್ರಾಬಾದ್ ಪೊಲೀಸರು ಇದರ ಸಿಸಿ ಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದಾರೆ.

ವ್ಯಕ್ತಿಯೊಬ್ಬರು ಕ್ಯಾಶ್ ಆನ್ ಡೆಲಿವರಿ ಮೂಲಕ ತಮಗೆ ಬೇಕಾದ ವಸ್ತು ತರಿಸಿಕೊಂಡಿದ್ದಾರೆ. ಡೆಲಿವರಿ ಬಾಯ್ ಅದನ್ನು ತಂದ ವೇಳೆ, ಆತನಿಗೆ ಹಣ ನೀಡಿ ತಮಗೆ ಬಂದಿದ್ದ ಪಾರ್ಸೆಲ್ ನ್ನು ಬಿಚ್ಚಿ ನೋಡುವುದರಲ್ಲಿ ಮಗ್ನರಾಗಿದ್ದರೆ ಇದೇ ಸಂದರ್ಭ ಸಾಧಿಸಿದ ಡೆಲಿವರಿ ಬಾಯ್, ಅವರ ಕೊಟ್ಟ ಹಣದಲ್ಲಿ ಒಂದಷ್ಟು ನೋಟನ್ನು ತನ್ನ ಶರ್ಟ್ ನೊಳಗೆ ತೂರಿಸಿಕೊಂಡಿದ್ದಾನೆ. ಬಳಿಕ ಎಣಿಸಿದಂತೆ ನಾಟಕವಾಡಿ ಹಣ ಕಡಿಮೆ ಇದೆ ಎಂದು ಹೇಳಿದ್ದಾನೆ. ಆದರೆ ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಆತನ ಕರಾಮತ್ತು ಸೆರೆಯಾಗಿದ್ದು, ಇದೀಗ ಸಿಕ್ಕಿ ಬಿದ್ದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...