alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನಕ್ಕೆ ಹೊಸ ಮಾರ್ಗ ಕಂಡುಕೊಂಡ ದರೋಡೆಕೋರರು

ದೆಹಲಿ: ಕಳ್ಳರನ್ನು ಹಿಡಿಯಲು ಪೊಲೀಸರೊಂದು ದಾರಿ ಹಿಡಿದರೆ, ಕಳ್ಳರು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ದಾರಿ ಕೇಳುವ ನೆಪದಲ್ಲಿ ದರೋಡೆ ನಡೆಸಿದ್ದಾರೆ.

ದೆಹಲಿಯ ಆನಂದ್‌ನಗರದಲ್ಲಿ ಅಪರಿಚಿತ ವ್ಯಕ್ತಿಗಳು ದಾರಿ ಕೇಳುವ ನೆಪದಲ್ಲಿ,‌ ಕಾರ್ ಚಾಲಕನನ್ನು ಮಾತನಾಡಿಸಿ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಿಂದ ಹೊರಡಲು‌ ಚಾಲಕ, ಕಾರ್ ಕೀ ಆನ್ ಮಾಡುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಬಂದು, ಕಾರ್ ಕಿಟಕಿ ತೆರೆಸಿದ್ದಾರೆ. ಕಿಟಕಿ‌ ತಗೆಯುತ್ತಿದ್ದಂತೆ, ಗನ್ ತೋರಿಸಿ ಕಾರ್ ಕೀ ಕಸಿದುಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ.

ಕಾರ್ ನಿಂದ ಚಾಲಕನನ್ನು ಇಳಿಸುತ್ತಿದ್ದಂತೆ ಇನ್ನೊಬ್ಬ ವ್ಯಕ್ತಿ ಬಂದು ಆತನಲ್ಲಿದ್ದ ಬಂಗಾರ ಹಾಗೂ ಹಣವನ್ನು‌ ದೋಚಿ ಕಾರ್ ಸಮೇತ ಪರಾರಿಯಾಗಿದ್ದಾರೆ. ದರೋಡೆಕೋರರನ್ನು ಹಿಡಿಯಲು‌ ಪೊಲೀಸರು ಬಲೆ ಬೀಸಿದ್ದಾರೆ ಎಂದು ದೆಹಲಿ‌ ಡಿಸಿಪಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...