alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಟ್ಟಿಂಗ್ ಗಾಗಿ ಹೆಂಡತಿಯನ್ನು ಪಣಕ್ಕಿಟ್ಟ ಭೂಪ ನಂತ್ರ ಮಾಡಿದ್ದೇನು..?

ipl-satta

ಐಪಿಎಲ್ ಬೆಟ್ಟಿಂಗ್ ಈಗ ಹೊಸ ವಿಷಯವಾಗಿ ಉಳಿದಿಲ್ಲ. ಆದ್ರೆ ಬೆಟ್ಟಿಂಗ್ ಗಾಗಿ ಮನುಷ್ಯ ಯಾವ ಹಂತಕ್ಕೆ ಇಳಿಯುತ್ತಾನೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಬೆಟ್ಟಿಂಗ್ ನಲ್ಲಿ ಹೆಂಡತಿಯನ್ನೇ ಪಣಕ್ಕಿಟ್ಟು ಸೋತ ಪತಿಯೊಬ್ಬ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಬೆಟ್ಟಿಂಗ್ ಆಡಲು ಹಣ ಇರದ ಕಾರಣ ಹೆಂಡತಿಯನ್ನು ಪಣಕ್ಕಿಟ್ಟಿದ್ದ. ಬೆಟ್ಟಿಂಗ್ ನಲ್ಲಿ ಸೋತ ನಂತರ ಹೆಂಡತಿಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಪತಿಯ ಈ ವರ್ತನೆಯಿಂದ ಸಾಕಷ್ಟು ಕಷ್ಟ ಅನುಭವಿಸಿದ್ದಾಳೆ ಪತ್ನಿ.

ಬೆಟ್ಟಿಂಗ್ ದಂಧೆಯಲ್ಲಿ 7 ಲಕ್ಷ ಸಾಲ ಮಾಡಿದ್ದನಂತೆ ಪತಿ. ಇದನ್ನು ತವರು ಮನೆಯಿಂದ ತರುವಂತೆ ಪೀಡಿಸುತ್ತಿದ್ದನಂತೆ. ವಿಷಯ ತಿಳಿದ ಪತ್ನಿ ಕಡೆಯವರು ಸಾಲ ತೀರಿಸಿದ್ದಾರೆ. ಆದ್ರೂ ಆತನಿಗೆ ಬುದ್ದಿ ಬರಲಿಲ್ಲ. ಮತ್ತೆ ಬೆಟ್ಟಿಂಗ್ ಶುರುಮಾಡಿದ್ದಾನೆ. ಪಣಕ್ಕಿಡಲು ಹಣವಿರದ ಕಾರಣ ಹೆಂಡತಿಯನ್ನೇ ಇಟ್ಟಿದ್ದಾನೆ.

ಸೋತ ನಂತ್ರ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಸಾಲ ಕೊಟ್ಟವರು ಮನೆಗೆ ಬರುತ್ತಾರಂತೆ. ಅಶ್ಲೀಲ ಪದ ಬಳಕೆ ಮಾಡುವುದಲ್ಲದೆ ಕೆಟ್ಟದಾಗಿ ನಡೆದುಕೊಳ್ಳುತ್ತಾರಂತೆ. ಇದರಿಂದ ಬೇಸತ್ತ ಪತ್ನಿ, ಬಿಜೆಪಿ ನಾಯಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿಯ ಹುಡುಕಾಟ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...