alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಯುವಕನಿಗೆ 10 ಲಕ್ಷ ರೂ. ಕೊಟ್ಟ ಫೇಸ್ ಬುಕ್

anand prak

ಸಾಮಾಜಿಕ ಜಾಲತಾಣ ಫೇಸ್ ಬುಕ್ ಅನ್ನು ವಿಶ್ವದಾದ್ಯಂತ ಅಪಾರ ಸಂಖ್ಯೆಯ ಜನ ಬಳಸುತ್ತಿದ್ದಾರೆ. ಹೀಗೆ ಹೆಚ್ಚಿನ ಜನ ಬಳಸುವ ಫೇಸ್ ಬುಕ್ ನಲ್ಲಿ ತಾಂತ್ರಿಕ ದೋಷವೊಂದು ಇದ್ದ ಕಾರಣ, ಮಾಹಿತಿ ಸೋರಿಕೆ ಆಗುತ್ತಿತ್ತು. ಇಂತಹ ದೋಷ ಪತ್ತೆ ಹಚ್ಚುವ ಮೂಲಕ ಯುವಕನೊಬ್ಬ ಗಮನ ಸೆಳೆದಿದ್ದಾನೆ.

ನವದೆಹಲಿಯಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಆನಂದ್ ಪ್ರಕಾಶ್, ಫೇಸ್ ಬುಕ್ ಲಾಗಿನ್ ನಲ್ಲಿದ್ದ ಹ್ಯಾಕಿಂಗ್ ಬಗ್ ಕಂಡು ಹಿಡಿದಿದ್ದು, ಈ ಮೂಲಕ ಫೇಸ್ ಬುಕ್ ವತಿಯಿಂದ 10 ಲಕ್ಷ ರೂಪಾಯಿ ಬಹುಮಾನ ಪಡೆದುಕೊಂಡಿದ್ದಾರೆ. ಫ್ಲಿಪ್ ಕಾರ್ಟ್ ನಲ್ಲಿ ಸೆಕ್ಯುರಿಟಿ ಅನಾಲಿಸ್ಟ್ ಆಗಿರುವ ಆನಂದ್ ಪ್ರಕಾಶ್ ಈ ಬಗ್ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡು ಕಳೆದ ಫೆಬ್ರವರಿ 22ರಂದು ಫೇಸ್ ಬುಕ್ ಸೆಕ್ಯುರಿಟಿ ಟೀಂಗೆ ವರದಿಯನ್ನು ಕಳುಹಿಸಿದ್ದರು.

ಫೇಸ್ ಬುಕ್ ಅಕೌಂಟ್ ಗೆ ಈ ಬಗ್ ದಾಳಿ ಮಾಡಿದ ಸಂದರ್ಭದಲ್ಲಿ ಹ್ಯಾಕರ್ ಗಳಿಗೆ ಖಾತೆಯ ಗೌಪ್ಯ ಮಾಹಿತಿಗಳು ಸೋರಿಕೆಯಾಗುತ್ತಿದ್ದವು. ಇದನ್ನು ಪತ್ತೆ ಮಾಡುವ ಮೂಲಕ ಆನಂದ್ ಪ್ರಕಾಶ್ ಮಾಹಿತಿ ನೀಡಿದ್ದಕ್ಕೆ ಫೇಸ್ ಬುಕ್ ಅವರಿಗೆ ಬಹುಮಾನ ನೀಡಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...