alex Certify
ಕನ್ನಡ ದುನಿಯಾ       Mobile App
       

Kannada Duniya

ಮೀಸೆ ಮೂಡದ ಹುಡುಗರ ನೀಚ ಕೃತ್ಯದಿಂದ ಆತ್ಮಹತ್ಯೆ ಮಾಡಿಕೊಂಡ್ಲು ಗೃಹಿಣಿ

ನಾಲ್ವರು ಹೈಸ್ಕೂಲ್ ಹುಡುಗರು ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಮನನೊಂದು ಪಶ್ಚಿಮ ಬಂಗಾಳದ ಈಸ್ಟ್ ಮಿಡ್ನಾಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಾರ್ಚ್ 17ರಂದು ಆಕೆ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಸೂಸೈಡ್ ನೋಟ್ ಒಂದನ್ನು ಕೂಡ ಆಕೆ ಬರೆದಿಟ್ಟಿದ್ಲು. ಅದರ ಆಧಾರದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ 21 ವರ್ಷದ ಚಂದನ್. ಇನ್ನೊಬ್ಬ 17 ವರ್ಷದವನಾಗಿದ್ದು, ಇನ್ನಿಬ್ಬರು 16 ವರ್ಷದ ಅಪ್ರಾಪ್ತರು.

ವಾರದ ಹಿಂದಷ್ಟೆ ಮಹಿಳೆಯ ಮೊಬೈಲ್ ಕಳೆದು ಹೋಗಿತ್ತು. ಹೈಸ್ಕೂಲ್ ಹುಡುಗರ ಕೈಗೆ ಆ ಮೊಬೈಲ್ ಸಿಕ್ಕಿದೆ. ಅದರಲ್ಲಿದ್ದ ಕೆಲವು ಖಾಸಗಿ ಫೋಟೋಗಳನ್ನು ಟ್ರಾನ್ಸ್ ಫರ್ ಮಾಡಿಕೊಂಡು ಹುಡುಗರು ಮೊಬೈಲ್ ಅನ್ನು ಮಹಿಳೆಗೆ ವಾಪಸ್ ಮಾಡಿದ್ದಾರೆ.

ನಂತರ ಆಕೆಗೆ ಕರೆ ಮಾಡಿ ತಮ್ಮೊಂದಿಗೆ ದೈಹಿಕ ಸಂಬಂಧ ಬೆಳೆಸದೇ ಇದ್ರೆ ಆ ಫೋಟೋಗಳನ್ನು ಲೀಕ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ನಗ್ನ ಫೋಟೋಗಳನ್ನು ತಮಗೆ ಕಳಿಸುವಂತೆ ಬೆದರಿಸಿದ್ದಾರೆ. ಆದ್ರೆ ಮಹಿಳೆ ಅದಕ್ಕೆ ಒಪ್ಪದೇ ಇದ್ದಾಗ, ಆಕೆಯ ಖಾಸಗಿ ಫೋಟೋಗಳನ್ನು ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...