alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆಗೂ ಪಶ್ಚಿಮ ಬಂಗಾಳ ಪಾಲಾಯ್ತು ರಸಗುಲ್ಲಾ

ರಸಗುಲ್ಲಾ ಬಗ್ಗೆ ಎರಡೂವರೆ ವರ್ಷಗಳಿಂದ ನಡೆಯುತ್ತಿದ್ದ ಜಟಾಪಟಿಯಲ್ಲಿ ಪಶ್ಚಿಮ ಬಂಗಾಳಕ್ಕೆ ಜಯ ಸಿಕ್ಕಿದೆ. ರಸಗುಲ್ಲಾ ಮೊದಲು ಹುಟ್ಟಿಕೊಂಡಿದ್ದೆಲ್ಲಿ ಎಂಬ ಬಗ್ಗೆ ಪಶ್ಚಿಮ ಬಂಗಾಳ ಹಾಗೂ ಓಡಿಶಾ ರಾಜ್ಯಗಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು.

ಮೊದಲು ರಸಗುಲ್ಲಾ ಹುಟ್ಟಿಕೊಂಡಿದ್ದು ಪಶ್ಚಿಮ ಬಂಗಾಳದಲ್ಲಿ ಅಂತಾ ಚೆನ್ನೈ ಮೂಲದ ಭೌಗೋಳಿಕ ಸೂಚನೆ ನೋಂದಾವಣಿ ಘಟಕ ಪ್ರಕಟಿಸಿದೆ. 2015ರಲ್ಲಿ ರಸಗುಲ್ಲಾ ಜಿಐ ರಿಜಿಸ್ಟ್ರೇಶನ್ ಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮತ್ತು ಓಡಿಶಾ ಮಧ್ಯೆ ಜಟಾಪಟಿ ಶುರುವಾಗಿತ್ತು.

ಸುಮಾರು 600 ವರ್ಷಗಳ ಹಿಂದೆಯೇ ರಸಗುಲ್ಲಾ ತಯಾರಿಕೆ ಆರಂಭಿಸಲಾಗಿತ್ತಂತೆ. 19ನೇ ಶತಮಾನದ ಇತಿಹಾಸದ ಪ್ರಕಾರ ರಸಗುಲ್ಲಾವನ್ನು ಮೊದಲು ತಯಾರಿಸಿದವರು ನಬಿನ್ ಚಂದ್ರ ದಾಸ್. 1868ರಲ್ಲಿ ಇವರು ಮೊದಲು ರಸಗುಲ್ಲಾ ತಯಾರಿಸಿದ್ದರು ಎಂಬ ದಾಖಲೆಗಳಿವೆ.

ಆದ್ರೆ ಓಡಿಶಾ ರಾಜ್ಯದ ವಾದವೇ ಬೇರೆ. ಮೊದಲು ರಸಗುಲ್ಲಾವನ್ನು ಪುರಿಯಲ್ಲಿ ಆವಿಷ್ಕರಿಸಲಾಗಿತ್ತು. ಅದಕ್ಕೆ ಆರಂಭದಲ್ಲಿ ಖೀರ್ ಮೋಹನ ಎಂದು ಕರೆಯಲಾಗುತ್ತಿತ್ತು. ನಂತರ ಪಹಲಾ ರಸಗುಲ್ಲಾ ಎಂದು ಹೆಸರು ಬದಲಾಗಿದೆ ಅಂತಾನೇ ಓಡಿಶಾ ವಾದಿಸುತ್ತಿತ್ತು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...